Kannada

ಮುಖ್ಯ ದ್ವಾರದ ವಾಸ್ತು: ಮನೆ ಪ್ರವೇಶ ದ್ವಾರವನ್ನು ಇಡಲು ಸಲಹೆಗಳು

[ecis2016.org] ಸುಂದರವಾಗಿ ಕಾಣಿಸುವುದರ ಜೊತೆಗೆ ಮನೆಯಲ್ಲಿ ಧನಾತ್ಮಕ ಶಕ್ತಿಯು ಪ್ರವೇಶಿಸುವುದಕ್ಕಾಗಿ ಮನೆಯ ಮುಖ್ಯ ದ್ವಾರವು ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇರಬೇಕು.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರವು ಕುಟುಂಬಕ್ಕೆ ಪ್ರವೇಶ ಸ್ಥಳವಷ್ಟೇ ಅಲ್ಲ, ಇದು ಶಕ್ತಿ ಸಂಚಯನದ ಸ್ಥಳವೂ ಹೌದು. ಮನೆಯ ಮುಖ್ಯ ದ್ವಾರವನ್ನು ಇಡುವುದಕ್ಕೆ ಸೂಕ್ತ ದಿಕ್ಕು ಎಂದರೆ ವಾಸ್ತುವಿನ ಪ್ರಕಾರ ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮ ದಿಕ್ಕುಗಳಾಗಿವೆ. ಇವನ್ನು ಮಂಗಳಕರ ಮತ್ತು ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯಲು ಅನುವು ಮಾಡುತ್ತದೆ ಎಂದು ಭಾವಿಸಲಾಗಿದೆ.

You are reading: ಮುಖ್ಯ ದ್ವಾರದ ವಾಸ್ತು: ಮನೆ ಪ್ರವೇಶ ದ್ವಾರವನ್ನು ಇಡಲು ಸಲಹೆಗಳು

 ಮುಖ್ಯ ದ್ವಾ ರೂಪಾಂತರದ ವಲಯ. ಇದರಿಂದ ನಾವು ಹೊರ ಜಗತ್ತಿನಿಂದ ಮನೆಯ ಒಳಗೆ ಪ್ರವೇಶಿಸುತ್ತೇವೆ. ಈ ದ್ವಾರದ ಮೂಲಕವೇ ಖುಷಿ ಮತ್ತು ಅದೃಷ್ಟ ಪ್ರವೇಶಿಸುತ್ತದೆ ಎಂದು ಮುಂಬೈ ಮೂಲದ ವಾಸ್ತು ಸಲಹೆಗಾರ ನಿತಿನ್ ಪಾರ್ಮರ್ ಹೇಳುತ್ತಾರೆ. “ಹೀಗಾಗಿ, ಮುಖ್ಯ ದ್ವಾರಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಇದು ಕಾಸ್ಮಿಕ್ ಎನರ್ಜಿಯನ್ನು ಒಳ ಬರಲು ಮತ್ತು ಹೊರಹೋಗಲು ಅನುವು ಮಾಡಿಕೊಟ್ಟು, ಆರೋಗ್ಯ, ಸಂಪತ್ತು ಮತ್ತು ಸೌಹಾರ್ದತೆಯನ್ನು ಪ್ರೋತ್ಸಾಹಿಸುತ್ತದೆ. ಅಷ್ಟಕ್ಕೂ, ಮುಖ್ಯ ದ್ವಾರವು ಮನೆಯ ಬಗ್ಗೆ ಮೊದಲ ಭಾವವನ್ನು ಬಿತ್ತುತ್ತದೆ.” ಎಂದು ಅವರು ಹೇಳುತ್ತಾರೆ.

ಮುಖ್ಯ ದ್ವಾರದ ವಾಸ್ತು ದಿಕ್ಕು

ಮುಖ್ಯ ದ್ವಾರವು ಎಂದಿಗೂ ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮದಲ್ಲಿ ಇರಬೇಕು. ಯಾಕೆಂದರೆ, ಈ ದಿಕ್ಕುಗಳನ್ನು ಮಂಗಳಕರ ಎಂದು ಪರಿಗಣಿಸಲಾಗಿಎ. ದಕ್ಷಿಣ, ನೈಋತ್ಯ, ವಾಯವ್ಯ ಆಗ್ನೇಯ ದಿಕ್ಕುಗಳಲ್ಲಿ ಮುಖ್ಯ ದ್ವಾರವನ್ನು ಇಡಬೇಡಿ. ದಕ್ಷಿಣ ಅಥವಾ ನೈಋತ್ಯದಲ್ಲಿನ ಮುಖ್ಯ ದ್ವಾರವನ್ನು ಸೀಸದ ಪಿರಾಮಿಡ್‌ ಅಥವಾ ಸೀಸದ ಹೆಲಿಕ್ಸ್‌ ಬಳಸಿಕೊಂಡು ಸರಿಪಡಿಸಬಹುದು. ವಾಯವ್ಯದಲ್ಲಿನ ಬಾಗಿಲನ್ನು ಹಿತ್ತಾಳೆ ಪಿರಾಮಿಡ್ ಮತ್ತು ಹಿತ್ತಾಳೆ ಹೆಲಿಕ್ಸ್‌ ಬಳಸಿ ಸರಿಪಡಿಸಬಹುದು. ಆಗ್ನೇಯ ದಿಕ್ಕಿನಲ್ಲಿನ ಮುಖ್ಯ ದ್ವಾರವನ್ನು ತಾಮ್ರದ ಹೆಲಿಕ್ಸ್‌ ಬಳಸಿ ಸರಿಪಡಿಸಬಹುದು” ಎಂದು ಪಾಮರ್ ಹೇಳಿದ್ದಾರೆ.

ಮನೆಯ ಮುಖ್ಯ ದ್ವಾರವು ಯಾವುದೇ ಇತರ ಬಾಗಿಲಿಗಿಂತ ದೊಡ್ಡದಾಗಿರಬೇಕು ಮತ್ತು ಪ್ರದಕ್ಷಿಣಾಕಾರವಾಗಿ ತೆರೆಯಬೇಕು. ಮುಖ್ಯ ದ್ವಾರದ ನೇರದಲ್ಲಿ ಮೂರು ಬಾಗಿಲುಗಳನ್ನು ಇಡಬೇಡಿ. ಇದು ಗಂಭೀರ ವಾಸ್ತು ದೋಷ ಎಂದು ಪರಿಗಣಿಸಲಾಗಿದೆ ಮತ್ತು ಇದು ಮನೆಯಲ್ಲಿ ಶಾಂತಿಗೆ ಭಂಗ ತರುತ್ತದೆ.

ಉತ್ತರ ದಿಕ್ಕಿನ ಮನೆ ವಾಸ್ತು ಬಗ್ಗೆ ವಿವರ ಓದಿ

ಮನೆ ಪ್ರವೇಶಕ್ಕೆ ವಾಸ್ತು: ಮುಖ್ಯ ದ್ವಾರಕ್ಕೆ ಉತ್ತಮ ದಿಕ್ಕುಗಳು

Vastu Shastra tips for the main door

ನಿಮ್ಮ ಮುಖ್ಯ ದ್ವಾರವನ್ನು ಯಾವ ದಿಕ್ಕಿಗೆ ಇಡುವುದು ಸೂಕ್ತ ಎಂಬುದಕ್ಕಾಗಿ ಈ ಮೇಲಿನ ಚಿತ್ರವನ್ನು ನೋಡಿ. 1 ಎಂಬುದು ಉತ್ತಮ ಸ್ಥಾನವನ್ನು ಸೂಚಿಸುತ್ತದೆ ಮತ್ತು ಇತರೆ ಸಂಖ್ಯೆಗಳು ಚಿತ್ರದಲ್ಲಿ ಅದಕ್ಕೆ ಅನುಗುಣವಾಗಿ ಇರುತ್ತವೆ.

ಕೆಲವು ದಿಕ್ಕುಗಳು ಇತರೆಗಿಂತ ಯಾಕೆ ಉತ್ತಮ ಎಂಬ ವಿವರ ಇಲ್ಲಿದೆ:

  • ಈಶಾನ್ಯ: ಚಿತ್ರದಲ್ಲಿ ತೋರಿಸಿರುವಂತೆ, ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಈಶಾನ್ಯವು ಅತ್ಯಂತ ಮಂಗಳಕರವಾಗಿದೆ. ಬೆಳಗ್ಗೆ ಸೂರ್ಯನ ಬೆಳಕಿಗೆ ಇದು ತೆರೆದುಕೊಳ್ಳುವುದರಿಂದ ಅಪಾರ ಶಕ್ತಿಯ ಮನೆಯ ಒಳಗೆ ಬರುತ್ತದೆ ಎಂದು ಈ ದಿಕ್ಕನ್ನು ಭಾವಿಸಲಾಗುತ್ತದೆ. ಇದು ಮನೆಗೆ ಮತ್ತು ಮನೆಯಲ್ಲಿ ವಾಸಿಸುವವರಿಗೆ ಅಪಾರ ಶಕ್ತಿ ಮತ್ತು ಧನಾತ್ಮಕತೆಯನ್ನು ನೀಡುತ್ತದೆ.
  • ಉತ್ತರ: ಈ ಸ್ಥಳದಲ್ಲಿದ್ದರೆ ಕುಟುಂಬಕ್ಕೆ ಸಂಪತ್ತು ಮತ್ತು ಅದೃಷ್ಟ ಲಭ್ಯವಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ, ಮನೆಯ ಮುಖ್ಯದ್ವಾರವನ್ನು ಈ ದಿಕ್ಕಿಗೆ ಇಡುವುದು ಎರಡನೇ ಉತ್ತಮ ಆಯ್ಕೆಯಾಗಿದೆ.
  • ಪೂರ್ವ: ಇದು ಮನೆಯ ಮುಖ್ಯದ್ವಾರಕ್ಕೆ ಸೂಕ್ತ ಸ್ಥಳವಲ್ಲ. ಆದರೆ, ನಿಮ್ಮ ಶಕ್ತಿಯನ್ನು ಪೂರ್ವ ದಿಕ್ಕು ವೃದ್ಧಿಸುತ್ತದೆ ಎಂದು ನಂಬಲಾಗಿದೆ. ಇದು ಖುಷಿಯನ್ನೂ ಹೆಚ್ಚಿಸುತ್ತದೆ.

ಪೂರ್ವ ದಿಕ್ಕಿನ ಮನೆಗೆ ಮುಖ್ಯದ್ವಾರದ ವಾಸ್ತು ಬಗ್ಗೆ ಇನ್ನಷ್ಟು ಓದಿ

  • ಆಗ್ನೇಯ: ಎಂದಿಗೂ ನೈಋತ್ಯ ಭಾಗದಲ್ಲಿ ಪ್ರವೇಶ ಮಾಡಬೇಡಿ. ಬೇರೆ ಯಾವುದೇ ಆಯ್ಕೆ ಇಲ್ಲದಿದ್ದರೆ ವಾಸ್ತು ಶಾಸ್ತ್ರ ಶಿಫಾರಸು ಮಾಡಿದ ಹಾಗೆ ಆಗ್ನೇಯ ದಿಕ್ಕನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
  • ವಾಯವ್ಯ: ಬೇರೆ ಯಾವುದೇ ಆಯ್ಕೆ ಇಲ್ಲದಿದ್ದರೆ, ನೀವು ವಾಯವ್ಯ ದಿಕ್ಕಿಗೆ ಪ್ರವೇಶ ಮಾಡಬಹುದು. ವಾಸ್ತು ಪ್ರಕಾರ ಸಂಜೆಯ ಸೂರ್ಯನ ಕಿರಣಗಳು ಇಲ್ಲಿ ಬೀಳುತ್ತವೆ ಮತ್ತು ಸಂಪತ್ತು ಈ ಮೂಲಕ ಮನೆಗೆ ಬರುತ್ತದೆ ಎಂದು ಭಾವಿಸಲಾಗುತ್ತದೆ

ಇದನ್ನೂ ಓದಿ: ವಾಸ್ತು ಪ್ರಕಾರ ಮುಖ್ಯ ಗೇಟ್‌ ಬಣ್ಣ ಸಂಯೋಜನೆಗಳು

ದಕ್ಷಿಣ ದಿಕ್ಕಿನ ಮನೆಯ ಪ್ರವೇಶ ದ್ವಾರಕ್ಕಾಗಿ ವಾಸ್ತು

ಹೆಚ್ಚಿನ ಜನರು ಪೂರ್ವ ದಿಕ್ಕಿನ ಮನೆಗಳಿಗೆ ಹೋಗಲು ಬಯಸುತ್ತಾರೆ ಏಕೆಂದರೆ ಅವು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ದಕ್ಷಿಣ ದಿಕ್ಕನ್ನು ಮರಣದ ಅಧಿಪತಿಯಾದ ಯಮನು ಆಳುತ್ತಾನೆ ಎಂಬ ನಂಬಿಕೆಯಿಂದಾಗಿ ದಕ್ಷಿಣ ದಿಕ್ಕಿನ ಮನೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಆದಾಗ್ಯೂ, ಕೆಲವು ತಜ್ಞರು ಒಂದು ದಿಕ್ಕನ್ನು ಒಳ್ಳೆಯದು ಅಥವಾ ಕೆಟ್ಟದು ಎಂದು ಕರೆಯಲಾಗುವುದಿಲ್ಲ ಎಂದು ನಂಬುತ್ತಾರೆ. ಇದಲ್ಲದೆ, ವಾಸ್ತು ತತ್ವಗಳ ಪ್ರಕಾರ ಮನೆಯನ್ನು ವಿನ್ಯಾಸಗೊಳಿಸಿದರೆ, ಅದು ಧನಾತ್ಮಕ ಶಕ್ತಿಯನ್ನು ಖಚಿತಪಡಿಸುತ್ತದೆ ಮತ್ತು ನಿವಾಸಿಗಳಿಗೆ ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ.

ದಕ್ಷಿಣಾಭಿಮುಖ ಪ್ರವೇಶಕ್ಕಾಗಿ ಕೆಲವು ಉಪಯುಕ್ತ ವಾಸ್ತು ಸಲಹೆಗಳು ಇಲ್ಲಿವೆ.

ಮುಖ್ಯ ಪ್ರವೇಶ ದೋಷವನ್ನು ಸರಿಪಡಿಸಿ: ಮನೆಯ ದಕ್ಷಿಣ ಭಾಗವನ್ನು ವಿನ್ಯಾಸಗೊಳಿಸಿ. ಅದನ್ನು ಆಗ್ನೇಯದಿಂದ ನೈಋತ್ಯಕ್ಕೆ ಒಂಬತ್ತು ಸಮಾನ ಭಾಗಗಳಾಗಿ (ಪಾದಗಳು) ವಿಂಗಡಿಸಿ. ದಕ್ಷಿಣಾಭಿಮುಖವಾಗಿರುವ ಮನೆಯ ಮುಖ್ಯ ದ್ವಾರವು ನಾಲ್ಕನೇ ಪಾದದಲ್ಲಿರಬೇಕು ಮತ್ತು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಪರ್ಯಾಯವಾಗಿ, ಒಬ್ಬರು ಮೂರನೇ, ಎರಡನೆಯ ಅಥವಾ ಮೊದಲ ಪದವನ್ನು ಆಯ್ಕೆ ಮಾಡಬಹುದು. ಪ್ರವೇಶಕ್ಕೆ ನೈಋತ್ಯ ದಿಕ್ಕನ್ನು ತಪ್ಪಿಸಿ.

ಅಡಿಗೆ ಮನೆ: ದಕ್ಷಿಣಾಭಿಮುಖವಾದ ಮನೆ ವಾಸ್ತು ಪ್ರಕಾರ, ಅಡುಗೆಮನೆಯನ್ನು ಮನೆಯ ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಇದು ಜಾಗಕ್ಕೆ ಸಾಕಷ್ಟು ಬೆಳಗಿನ ಸೂರ್ಯನ ಬೆಳಕನ್ನು ತರುತ್ತದೆ. ಇದಲ್ಲದೆ, ಆಗ್ನೇಯವು ಅಗ್ನಿ ಅಥವಾ ಅಗ್ನಿಯ ದೇವರ ದಿಕ್ಕು ಮತ್ತು ಸಾಕಷ್ಟು ಗಾಳಿಯನ್ನು ಖಾತ್ರಿಪಡಿಸಿಕೊಳ್ಳುವಾಗ ಅಡುಗೆಮನೆಗೆ ಸೂಕ್ತವಾಗಿದೆ.

ಮಲಗುವ ಕೋಣೆಗಳು: ಮನೆಯ ನೈಋತ್ಯ ಮೂಲೆಯಲ್ಲಿ ಮಾಸ್ಟರ್ ಬೆಡ್‌ರೂಮ್ ಅನ್ನು ವಿನ್ಯಾಸಗೊಳಿಸಿ, ದಕ್ಷಿಣಕ್ಕೆ ಎದುರಾಗಿರುವ ಪ್ರವೇಶ ದ್ವಾರವನ್ನು ಹೊಂದಿರುವ ಮನೆಯಲ್ಲಿ. ಮನೆಯಲ್ಲಿ ಬಹು ಮಹಡಿಗಳಿದ್ದರೆ, ಮಾಸ್ಟರ್ ಬೆಡ್‌ರೂಮ್‌ಗಾಗಿ ಮೇಲಿನ ಮಹಡಿಯನ್ನು ಆರಿಸಿ. ಇತರ ಕೊಠಡಿಗಳನ್ನು ವಾಯುವ್ಯ ದಿಕ್ಕಿನಲ್ಲಿ ಇರಿಸಿ.

ದಕ್ಷಿಣ ದಿಕ್ಕಿನ ಪ್ಲಾಟ್‌ಗೆ, ಮನೆಯ ಯೋಜನೆಯು ಆಯತಾಕಾರದ ಅಥವಾ ಚದರ ಆಕಾರದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ. ದಕ್ಷಿಣ ಮತ್ತು ಪಶ್ಚಿಮದ ಗೋಡೆಗಳು ಇತರ ಬದಿಗಳಲ್ಲಿನ ಗೋಡೆಗಳಿಗಿಂತ ಬಲವಾಗಿರಬೇಕು ಮತ್ತು ಎತ್ತರವಾಗಿರಬೇಕು. ನೈಋತ್ಯದಲ್ಲಿ ನೀರಿನ ಪಂಪ್‌ಗಳು, ಕಾರ್ ಪೋರ್ಚ್‌ಗಳು, ಸೆಪ್ಟಿಕ್ ಟ್ಯಾಂಕ್ ಅಥವಾ ಉದ್ಯಾನಗಳು ಇರಬಾರದು. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಹೆಚ್ಚು ಮರಗಳನ್ನು ನೆಡಿರಿ ಅಥವಾ ವಾಯುವ್ಯ ಮೂಲೆಯಲ್ಲಿ ಸಸ್ಯಗಳು ಮತ್ತು ಹೂಕುಂಡಗಳನ್ನು ಇರಿಸಿ.

ಆಗ್ನೇಯ ಪ್ರವೇಶ ವಾಸ್ತು: ಆಗ್ನೇಯ ದಿಕ್ಕಿನ ಮನೆ ಉತ್ತಮವೇ ಅಥವಾ ಕೆಟ್ಟದ್ದೇ?

ಮನೆ ಪ್ರವೇಶಕ್ಕೆ ವಾಸ್ತು ಶಾಸ್ತ್ರದ ನೀತಿಗಳ ಪ್ರಕಾರ, ಮುಖ್ಯ ದ್ವಾರವನ್ನು ಆಗ್ನೇಯ ದಿಕ್ಕಿನಲ್ಲಿ ಇಡದೇ ಇರುವುದು ಉತ್ತಮ. ಆಗ್ನೇಯ ದಿಕ್ಕಿನಲ್ಲಿ ಮನೆ ಪ್ರವೇಶವು ವಾಸ್ತು ದೋಷವಾಗಿದ್ದು, ಇದಕ್ಕೆ ಕೆಲವು ಸರಳ ಪರಿಹಾರಗಳಿವೆ.

  • ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಬಾಗಿಲು ಇದ್ದಲ್ಲಿ, ಲೀಡ್ ಮೆಟಲ್‌ ಪಿರಾಮಿಡ್ ಮತ್ತು ಲೀಡ್‌ ಹೆಲಿಕ್ಸ್‌ ಬಳಸುವ ಮೂಲಕ ದೋಷವನ್ನು ಸರಿಪಡಿಸಬಹುದಾಗಿದೆ.
  • ಓಮ್ ಅಥವಾ ಸ್ವಸ್ತಿಕ್‌ನಂತಹ ಚಿಹ್ನೆಗಳನ್ನು ಇಡಿ. ಇದನ್ನು ತಾಮ್ರ ಅಥವಾ ಬೆಳ್ಳಿ ಸಾಮಗ್ರಿಗಳಿಂದ ಮಾಡಿರಬಹುದು. ಇದು ವಾಸ್ತು ದೋಷದ ಋಣಾತ್ಮಕ ಶಕ್ತಿಯನ್ನು ನಿವಾರಣೆ ಮಾಡುತ್ತದೆ. ಇದು ಅದೃಷ್ಟವನ್ನೂ ಆಹ್ವಾನಿಸುತ್ತದೆ.
  • ಮೂರು ವಾಸ್ತು ಪಿರಾಮಿಡ್‌ಗಳನ್ನೂ ಇಡಬಹುದು. ಮನೆ ಪ್ರವೇಶದ ಮುಖ್ಯ ದ್ವಾರದ ಮೇಲ್ಭಾಗದಲ್ಲಿ ಪಿರಾಮಿಡ್ ಅನ್ನು ಇಡುವ ಮೂಲಕ ಅದನ್ನು ಹೊಂದಿಸಿ. ಬಾಗಿಲಿನ ಎರಡೂ ಕಡೆಗಳಲ್ಲಿ ಇತರ ವಾಸ್ತು ಪಿರಾಮಿಡ್‌ಗಳನ್ನು ಇಡಿ.
  • ಆಗ್ನೇಯ ದಿಕ್ಕಿನ ಪ್ರವೇಶ ದ್ವಾರದ ಸುತ್ತ ಕಂದು ಅಥವಾ ಕಡು ಕೆಂಪು ಕರ್ಟನ್‌ಗಳನ್ನು ನೇತುಹಾಕಿ, ವಾಸ್ತು ದೋಷವನ್ನು ನಿವಾರಿಸಿ.
  • ಈ ಮನೆಗೆ ಇನ್ನೊಂದು ವಾಸ್ತು ದೋಷದ ಪರಿಹಾರವೆಂದರೆ, ಆಗ್ನೇಯ ದಿಕ್ಕಿನ ಕಡೆಗೆ ಮುಖ ಮಾಡಿರುವ 9 ಕಾರ್ನೆಲ್ಲನ್‌ ಹರಳುಗಳನ್ನು ಇಡಬಹುದು.

 

ಮನೆ ಪ್ರವೇಶಕ್ಕೆ ವಾಸ್ತು: ಮುಖ್ಯದ್ವಾರದ ಎದುರು ಏನನ್ನು ಇಡಬೇಕು?

  • ಪ್ರತಿ ಮನೆಯಲ್ಲೂ ಮುಖ್ಯದ್ವಾರದ ಎದುರು ನೇಮ್‌ಪ್ಲೇಟ್ ಇರಬೇಕು. ವಾಯವ್ಯ ದಿಕ್ಕಿನ ಮುಖ್ಯ ದ್ವಾರಕ್ಕೆ ಲೋಹದ ನೇಮ್‌ಪ್ಲೇಟ್‌ ಅತ್ಯಂತ ಸೂಕ್ತವಾಗಿದೆ. ಮರದ ನೇಮ್‌ಪ್ಲೇಟ್‌ ಅನ್ನು ಪ್ರವೇಶ ದ್ವಾರದ ಎದುರು ಇಡಬಹುದು.
  • ಓಮ್‌, ಸ್ವಸ್ತಿಕ, ಕ್ರಾಸ್‌ ಇತ್ಯಾದಿ ದಿವ್ಯ ಚಿಹ್ನೆಗಳೊಂದಿಗೆ ಮುಖ್ಯ ದ್ವಾರವನ್ನು ಅಲಂಕರಿಸಿ. ನೆಲದ ಮೇಲೆ ರಂಗೋಲಿ ಹಾಕಿ. ಇವುಗಳನ್ನು ಮಂಗಳಕರ ಮತ್ತು ಶುಭವನ್ನು ಆಹ್ವಾನಿಸುತ್ತದೆ ಎಂದು ಪರಿಗಣಿಸಲ್ಪಟ್ಟಿವೆ.
  • ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳನ್ನು ಪ್ರವೇಶ ದ್ವಾರದ ಪ್ರದೇಶದಲ್ಲಿ ಇಟ್ಟು ಅಲಂಕಾರ ಮಾಡಬಹುದು. ಇದು ಅದೃಷ್ಟ, ಸಂಪತ್ತು ಮತ್ತು ಶುಭವನ್ನು ಆಕರ್ಷಿಸುತ್ತದೆ.
  • ನೀರು ಮತ್ತು ಹೂವಿನ ಪಕಳೆಗಳು ತುಂಬಿದ ಗ್ಲಾಸ್ ಪಾಟ್ ಅನ್ನು ಇಡುವ ಮೂಲಕ ಮನೆಯ ಪ್ರವೇಶ ದ್ವಾರವನ್ನು ಸುಂದರಗೊಳಿಸಿ.
  • ಪ್ರವೇಶ ದ್ವಾರದ ಬಳಿಯ ಪ್ರದೇಶದಲ್ಲಿ ಉತ್ತಮ ಬೆಳಕು ಇರಲಿ. ಸರಿಯಾದ ಲೈಟ್‌ಗಳನ್ನು ಇಲ್ಲಿ ಅಳವಡಿಸಿ.
  • ಮನೆ ಪ್ರವೇಶದ ಬಗ್ಗೆ ವಾಸ್ತು ಶಾಸ್ತ್ರದ ಪ್ರಕಾರ, ದುಷ್ಟ ಸಂಗತಿಗಳನ್ನು ದೂರವಿಡಲು ಮತ್ತು ದುಷ್ಟ ಶಕ್ತಿಗಳು ಮನೆಯ ಪ್ರವೇಶದ್ವಾರದಿಂದ ದೂರವಿಡಲು, ಪ್ರವೇಶ ದ್ವಾರದಲ್ಲಿ ಕಪ್ಪು ಕುದುರೆ ಪಾದವನ್ನು ನೇತು ಹಾಕಬಹುದು.
  • ಮನೆಯ ಮುಖ್ಯ ದ್ವಾರದಲ್ಲಿ ಎಂದಿಗೂ ಅಡಿಪಟ್ಟಿ ಇರಬೇಕು. ಇದನ್ನು ಮಾರ್ಬಲ್‌ ಅಥವಾ ಮರದಿಂದ ಮಾಡಿದ್ದಿರಬಹುದು. ಇದು ಋಣಾತ್ಮಕ ಶಕ್ತಿಯನ್ನು ಗ್ರಹಿಸಿಕೊಂಡು, ಧನಾತ್ಮಕ ಶಕ್ತಿ ಮಾತ್ರ ಒಳ ಹೋಗಲು ಬಿಡುತ್ತದೆ ಎಂದು ಭಾವಿಸಲಾಗಿದೆ.
  • ಹಾಗೆಯೇ ಪ್ರವೇಶ ದ್ವಾರದಲ್ಲಿ ಡೋರ್‌ಮ್ಯಾಟ್‌ಗಳನ್ನು ಹಾಕಿಡಿ. ಇದರಿಂದ ದುಷ್ಟ ಶಕ್ತಿಗಳು ಮತ್ತು ಕೊಳೆ ಮನೆ ಪ್ರವೇಶಿಸುವುದಿಲ್ಲ. ಜನರು ಒಳಗೆ ಬರುವಾಗ ತಮ್ಮ ಕಾಲುಗಳನ್ನು ಈ ಡೋರ್‌ಮ್ಯಾಟ್‌ನಲ್ಲಿ ಸ್ವಚ್ಛಗೊಳಿಸಿಕೊಂಡೇ ಬರುತ್ತಾರೆ.
  • ಮನೆಯ ಪ್ರವೇಶ ದ್ವಾರದ ಸಮೀಪದಲ್ಲಿ ಮಂಗಳಕರ ಸಸ್ಯಗಳನ್ನು ಇಡಿ. ಉದಾಹರಣೆಗೆ, ಮನಿ ಪ್ಲಾಟ್‌ ಅಥವಾ ತುಳಸಿ ಗಿಡ.

ಮುಖ್ಯ ದ್ವಾರದ ವಿಚಾರದಲ್ಲಿ ದೂರವಿಡಬೇಕಾದ ಸಂಗತಿಗಳು

  • ಮನೆ, ಅದರಲ್ಲೂ ಮುಖ್ಯ ಪ್ರವೇಶ ದ್ವಾರವು ಸ್ವಚ್ಛವಾಗಿದ್ದರೆ ಧನಾತ್ಮಕ ಶಕ್ತಿಯು ಒಳಬರುತ್ತದೆ. ಶೂ ರಾಕ್‌ಗಳು, ಹಳೆಯ ಪೀಠೋಪಕರಣಗಳು, ಕಸದತೊಟ್ಟಿಗಳು, ಮುರಿದ ಕುರ್ಚಿಗಳು ಅಥವಾ ಸ್ಟೂಲ್‌ಗಳನ್ನು ಮುಖ್ಯ ಬಾಗಿಲಿನ ಬಳಿ ಇಡಬೇಡಿ.
  • ಮುಖ್ಯ ದ್ವಾರದ ಎದುರು ಎಂದಿಗೂ ಕನ್ನಡಿ ಇಡಬೇಡಿ. ಇದು ಮನೆಗೆ ಪ್ರವೇಶಿಸುವ ಶಕ್ತಿಗಳನ್ನು ಪ್ರತಿಫಲಿಸಬಹುದು.
  • ಮುಖ್ಯ ದ್ವಾರದ ಬಳಿ ಕಪ್ಪು ಬಣ್ಣಗಳು ಇರುವ ಯಾವುದೇ ಪೇಂಟಿಂಗ್‌ ಅಥವಾ ಕಲಾಕೃತಿಯನ್ನು ಇಡಬೇಡಿ. 
  • ಮುಖ್ಯ ದ್ವಾರದ ಪ್ರವೇಶದಲ್ಲಿ ಲೈಟ್‌ಗಳನ್ನು ಅಳವಡಿಸುವಾಗ ಕೆಂಪು ಬಣ್ಣದ ಲೈಟ್‌ಗಳನ್ನು ಬಳಸಬೇಡಿ.

ವಾಸ್ತು ಪ್ರಕಾರ ಮುಖ್ಯ ಪ್ರವೇಶ ದ್ವಾರದ ಗಾತ್ರ

ವಾಸ್ತು ಪ್ರಕಾರ ಮುಖ್ಯ ಪ್ರವೇಶ ದ್ವಾರದ ಗಾತ್ರವು ಮನೆಯಲ್ಲಿನ ಇತರ ಎಲ್ಲ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ವಾಸ್ತು ಶಾಸ್ತ್ರದಲ್ಲಿ ಇದು ಅತ್ಯಂತ ಮುಖ್ಯವಾಗಿದ್ದು, ಕುಟುಂಬಕ್ಕೆ ಅದೃಷ್ಟ, ಸಂಪತ್ತು ಮತ್ತು ಆರೋಗ್ಯವನ್ನು ತರುತ್ತದೆ ಎಂದು ಭಾವಿಸಲಾಗಿದೆ.

ಒಂದು ದೊಡ್ಡ ಯುನಿಟ್‌ ಆಗಿ ಬರುವುದಕ್ಕಿಂತ ಎರಡು ಭಾಗಗಳಾಗಿ ಬರುವುದು ಉತ್ತಮ. ಬಾಗಿಲಿಗೆ ಬರುವ ದಾರಿ ಉತ್ತಮ ಸ್ಥಳವನ್ನು ಹೊಂದಿದೆ ಮತ್ತು ಯಾವುದೇ ಮೂಲೆ ಆಗಿರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಮುಖ್ಯ ದ್ವಾರದ ವಾಸ್ತು: ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳು

ಮುಖ್ಯ ದ್ವಾರದಲ್ಲಿ ಸೂರ್ಯನ ಬೆಳಕು ಮತ್ತು ಸೂಕ್ತ ಲೈಟಿಂಗ್‌

ಬೆಳಗ್ಗೆ ಸಾಕಷ್ಟು ಸೂರ್ಯನ ಬೆಳಕನ್ನು ಆಹ್ವಾನಿಸುವ ಮುಖ್ಯ ದ್ವಾರ ಅತ್ಯಂತ ಮಂಗಳಕರ ಎಂದು ಭಾವಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಖ್ಯ ದ್ವಾರಕ್ಕೆ ಈಶಾನ್ಯ ದಿಕ್ಕು ಸೂಕ್ತವಾಗಿದೆ. ಮನೆಯ ಮುಖ್ಯ ದ್ವಾರವು ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯಬೇಕು. ಇಲ್ಲವಾದಲ್ಲಿ, ಸೂರ್ಯನ ಬೆಳಕಿನ ಧನಾತ್ಮಕ ಶಕ್ತಿಯನ್ನು ಪ್ರತಿನಿಧಿಸುವ ಹಳದಿ ಬೆಳಕುಗಳನ್ನು ನೀವು ಬಳಕೆ ಮಾಡಬಹುದಾಗಿದೆ.

ಮುಖ್ಯ ದ್ವಾರದಲ್ಲಿ ಪ್ರಖರವಾದ ಬೆಳಕನ್ನು ಎಂದಿಗೂ ಬಳಸಿ. ಆದರೆ, ಕೆಂಪು ಬಣ್ಣದ ಬೆಳಕನ್ನು ಬಳಸಬೇಡಿ. ವಾಸ್ತು ನಿಯಮಗಳ ಪ್ರಕಾರ, ಫ್ಲಾಟ್‌ಗಳು ಮತ್ತು ಆಧುನಿಕ ಮನೆಗಳಲ್ಲಿ ಮುಖ್ಯ ದ್ವಾರದಲ್ಲಿ ಚೆನ್ನಾಗಿ ಬೆಳಕು ಸಂಜೆಯ ಸಮಯದಲ್ಲಿ ಇರಬೇಕು.

ಸಂಪತ್ತು ಮತ್ತು ಸಮೃದ್ಧಿಗಾಗಿ

ವಾಸ್ತು ಸಲಹೆಯ ಪ್ರಕಾರ ನೀರು ಮತ್ತು ಹೂವಿನ ಪಕಳೆಗಳನ್ನು ಹಾಕಿದ ಗ್ಲಾಸ್‌ ಪಾಟ್‌ ಅನ್ನು ಮುಖ್ಯ ದ್ವಾರದ ಬಳಿ ಅಥವಾ ಮನೆ ದ್ವಾರದ ಬಳಿ ಇಡಿ. ಋಣಾತ್ಮಕ ಶಕ್ತಿಯನ್ನು ನೀರು ಪ್ರತಿರೋಧಿಸುವುದರಿಂದ ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ. ನಿಮ್ಮ ಮನೆಯ ಪ್ರವೇಶದ ಬಳಿ ಲಕ್ಷ್ಮಿ ಪಾದದ ಸ್ಟಿಕ್ಕರ್‌ಗಳನ್ನೂ ಅಂಟಿಸಬಹುದು. ಅಷ್ಟಕ್ಕೂ, ಈ ಸಾಮಗ್ರಿಗಳು ಮನೆಯ ಪ್ರವೇಶದ ಬಳಿ ಅಲಂಕಾರದ ರೀತಿ ಕೆಲಸ ಮಾಡುತ್ತವೆ.

ಮುಖ್ಯ ದ್ವಾರದ ಬಾಗಿಲಿನ ಅಲಂಕಾರ

ಮುಖ್ಯ ದ್ವಾರದ ಬಳಿ ಸ್ಥಳವಿದ್ದರೆ ಹಸಿರು ಸಸ್ಯಗಳನ್ನು ಬಳಸಿ ಅಲಂಕಾರ ಮಾಡಿ. ಮುಖ್ಯ ದ್ವಾರದ ಅಲಂಕಾರಕ್ಕೆ ತೋರಣಗಳೂ ಉತ್ತಮ ಆಯ್ಕೆ. ಪ್ರಾಣಿಯ ಪ್ರತಿಕೃತಿಗಳು, ಹೂವುಗಳು ಇಲ್ಲದ ಮರಗಳು ಮತ್ತು ಇತರ ಪ್ರತಿಕೃತಿಗಳು ಅಥವಾ ಕಾರಂಜಿ ಮತ್ತು ನೀರು ತುಂಬಿರುವ ಯಾವುದೇ ಸಾಮಗ್ರಿಯನ್ನು ಮುಖ್ಯ ದ್ವಾರದ ಬಳಿ ಇಡಬಾರದು.

ಇದನ್ನೂ ನೋಡಿ: ಮನೆ ಪ್ರವೇಶದ್ವಾರಕ್ಕೆ ಯಾವ ಸಸ್ಯ ಉತ್ತಮವಾಗಿದೆ

ಮುಖ್ಯ ದ್ವಾರದ ಭಾಗವಾಗಿ ಅಲಂಕಾರಿಕ ತೂಗುವ ಗಂಟೆಗಳು ಮನೆಗೆ ಧನಾತ್ಮಕ ಪ್ರಭೆಯನ್ನು ಆಹ್ವಾನಿಸುವಲ್ಲಿ ಪರಿಣಾಮಕಾರಿಯಾಗಿವೆ. ಪ್ರವೇಶ ದ್ವಾರದಲ್ಲಿ ರಂಗೋಲಿ ವಿನ್ಯಾಸಗಳು ಲಕ್ಷ್ಮಿದೇವಿಯನ್ನು ಮತ್ತು ಮನೆಗೆ ಅತಿಥಿಗಳನ್ನು ಆಹ್ವಾನಿಸುತ್ತದೆ. ಇದು ಧನಾತ್ಮಕ ಪ್ರಭೆಯನ್ನೂ ನೀಡುತ್ತದೆ. ಖುಷಿಯನ್ನು ಪಸರಿಸಿ ದುಷ್ಟ ಶಕ್ತಿಯನ್ನು ನಿವಾರಿಸುತ್ತದೆ. ಬಣ್ಣದ ಪೌಡರ್‌, ಅರಿಶಿಣ ಪೌಡರ್‌, ಲೈಮ್‌ಸ್ಟೋನ್‌ ಪೌಡರ್‌ ಗೇರು (ಬೂದು ಮಣ್ಣಿನ ಪೌಡರ್) ಹೂವು ಪಕಳೆಗಳು ಅಥವಾ ಅಕ್ಕಿ ಹಿಟ್ಟನ್ನು ಬಳಸಿ ರಂಗೋಲಿಯನ್ನು ವಿನ್ಯಾಸ ಮಾಡಬಹುದು.

ಮುಖ್ಯ ದ್ವಾರದ ದಿಕ್ಕು

ವಾಸ್ತು ನಿಯಮಗಳ ಪ್ರಕಾರ ಮುಖ್ಯ ಬಾಗಿಲು ಅಥವಾ ಮನೆಯ ಪ್ರವೇಶ ಗೇಟ್‌ ಒಂದೇ ದಿಕ್ಕಿನಲ್ಲಿ ಇರಲಿ. ಮುಖ್ಯ ದ್ವಾರವು 90 ಡಿಗ್ರಿ ಆಗಿರಬೇಕು. ದಾರಿಯಲ್ಲಿ ಯಾವುದೇ ಅಡ್ಡಿ ಇರಬಾರದು. ಇದು ಪ್ರದಕ್ಷಿಣಾಕಾರವಾಗಿ ತೆರೆಯಬೇಕು. ಹಿಂಜ್‌ಗಳಿಗೆ ಆಗಾಗ್ಗೆ ತೈಲವನ್ನು ಹಾಕುತ್ತಿರಿ ಮತ್ತು ಬಾಗಿಲಿನ ಸಲಕರಣೆಗಳನ್ನು ಪಾಲಿಶ್ ಮಾಡುತ್ತಿರಿ.  ಒಡೆದ ಅಥವಾ ಮರದ ಕೆತ್ತಿ ಬಿಟ್ಟ ಭಾಗಗಳು ಇರಬಾರದು. ಸ್ಕ್ರೂಗಳು ಕಳಚಿರಬಾರದು. ಯಾವುದೇ ಮೊಳೆಗಳು ಬಾಗಿಲ ಬಳಿ ಇರಬಾರದು.

ಮನೆಯ ಮೂಲೆಯಲ್ಲಿ ಮುಖ್ಯ ದ್ವಾರ ಇರಬಾರದು. ಸಂಪತ್ತು ಆಶ್ರಯಿಸುವುದಕ್ಕಾಗಿ ಮನೆಯ ಮೂಲೆಯನ್ನು ಖಾಲಿ ಇಟ್ಟಿರಬೇಕು.

ನೇಮ್‌ಪ್ಲೇಟ್‌ ಮತ್ತು ವಾಸ್ತು

ಸ್ಟೈಲಿಶ್ ಆದ ನೇಮ್ ಪ್ಲೇಟ್‌ಗಳನ್ನು ಹಾಕುವುದು ಉತ್ತಮ ಮುಖ್ಯ ದ್ವಾರದ ವಿನ್ಯಾಸ ಮತ್ತು ಅಲಂಕಾರ ಐಡಿಯಾ ಆಗಿದೆ. ಒಂದು ನೇಮ್‌ಪ್ಲೇಟ್ ಯಾವಾಗಲೂ ಹಾಕಿ. ಬಾಗಿಲು ಉತ್ತರಕ್ಕೆ ಅಥವಾ ಪಶ್ಚಿಮ ದಿಕ್ಕಿಗೆ ಇದ್ದಲ್ಲಿ ಲೋಹದ ನೇಮ್‌ಪ್ಲೇಟ್ ಅನ್ನು ಶಿಫಾರಸು ಮಾಡುತ್ತೇವೆ. ದಕ್ಷಿಣ ಅಥವಾ ಪೂರ್‍ವ ದಿಕ್ಕಿಗೆ ಬಾಗಿಲು ಇದ್ದಲ್ಲಿ ಮರದ ನೇಮ್‌ಪ್ಲೇಟ್‌ ಬಳಸಿ. ಮುಖ್ಯ ಬಾಗಿಲಿನ ಎಡ ಭಾಗದಲ್ಲಿ ಇರಲಿ. ಈ ಭಾಗವು ಇತರ ಬದಿಗಳಿಗಿಂತ ಹೆಚ್ಚು ಮಂಗಳಕರ ಎಂದು ಭಾವಿಸಲಾಗಿದೆ.

Read also : ನಿಮ್ಮ ಮುಂದಿನ ಪ್ರವಾಸವನ್ನು ಯೋಜಿಸುತ್ತಿರುವಿರಾ? ಭಾರತದಲ್ಲಿ ಭೇಟಿ ನೀಡಲು ಟಾಪ್ 10 ಸ್ಥಳಗಳನ್ನು ನೋಡೋಣ

ಪಶ್ಚಿಮ ದಿಕ್ಕಿನ ಮನೆಗಳ ಬಗ್ಗೆ ನಮ್ಮ ಲೇಖನದಲ್ಲಿ ಪಶ್ಚಿಮ ಪ್ರವೇಶ ದ್ವಾರದ ವಾಸ್ತು ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ.

ಮುಖ್ಯ ಬಾಗಿಲಿಗೆ ಡೋರ್‍‌ಬೆಲ್‌

ಐದು ಅಡಿ ಅಥವಾ ಹೆಚ್ಚು ಎತ್ತರಕ್ಕೆ ಡೋರ್‍‌ಬೆಲ್‌ ಅಳವಡಿಸಿ. ಜಾರ್‍‌ರಿಂಗ್‌, ಬ್ರಾಸಿ ಅಥವಾ ಹೆಚ್ಚು ಧ್ವನಿ ಇರುವ ಡೋರ್‍‌ಬೆಲ್‌ಗಳನ್ನು ಅಳವಡಿಸಬಾರದು. ಮನೆಗೆ ಧನಾತ್ಮಕ ಶಕ್ತಿಯು ಪ್ರವೇಶಿಸುವುದಕ್ಕಾಗಿ ಮೃದುವಾದ ಧ್ವನಿಯ ಡೋರ್‍‌ಬೆಲ್‌ ಆಯ್ಕೆ ಮಾಡಿಕೊಳ್ಳಿ.

ಮುಖ್ಯ ದ್ವಾರಕ್ಕೆ ಬಳಸುವ ಮರದ ಗುಣಮಟ್ಟ

ಫ್ಲಾಟ್‌ ರೀತಿ ಮನೆಗಳನ್ನು ನಿರ್ಮಾಣ ಮಾಡುವಾಗ ಮುಖ್ಯ ದ್ವಾರದ ವಾಸ್ತು ನಿಯಮಗಳ ಪ್ರಕಾರ, ಸರಿಯಾದ ಸಾಮಗ್ರಿಯನ್ನು ನೀವು ಆಯ್ಕೆ ಮಾಡುವುದು ಮುಖ್ಯ. ಉತ್ತಮ ಗುಣಮಟ್ಟದ ಮರವನ್ನೇ ಬಳಸಿ. ನಿಮ್ಮ ಮನೆಯಲ್ಲಿನ ಇತರ ಬಾಗಿಲಿಗಿಂತ ಈ ಬಾಗಿಲಿನ ಎತ್ತರ ಹೆಚ್ಚಿರಬೇಕು.

vastu for main door

Source: Shutterstock

ಮುಖ್ಯ ದ್ವಾರ ಮತ್ತು ಶೌಚಾಲಯಗಳು

ಮುಖ್ಯ ದ್ವಾರದ ಸಮೀಪದಲ್ಲಿ ಶೌಚಾಲಯಗಳು ಇರಬಾರದು. ತಿಳಿ ಹಳದಿ, ಬೀಜ್‌ ಅಥವಾ ಮಣ್ಣಿನ ಬಣ್ಣಗಳಂತಹ ಮೃದುವಾದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಂಪು ಅಥವಾ ಕಿತ್ತಳೆಯಂತಹ ಪ್ರಖರ ಬಣ್ಣವನ್ನು ಬಳಸಬೇಡಿ.

ಪ್ರಕಾಶಮಾನ ಮುಖ್ಯ ದ್ವಾರದ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ.

ವಾಸ್ತು ಪ್ರಕಾರ ಮುಖ್ಯ ದ್ವಾರಕ್ಕೆ ಅತ್ಯಂತ ಮಂಗಳಕರ ಬಣ್ಣಗಳೆಂದರೆ ಈ ಕೆಳಗಿನವುಗಳಾಗಿದ್ದು, ಇವು ಮನಗೆ ಖುಷಿ ಮತ್ತು ಅದೃಷ್ಟವನ್ನು ತರಲಿವೆ:

  • ಪಶ್ಚಿಮ: ನೀಲಿ ಮತ್ತು ಬಿಳಿ.
  • ದಕ್ಷಿಣ ಮತ್ತು ಆಗ್ನೇಯ: ಬೆಳ್ಳಿ, ಕಿತ್ತಳೆ ಮತ್ತು ತಿಳಿಗುಲಾಬಿ.
  • ನೈಋತ್ಯ: ಹಳದಿ.
  • ಉತ್ತರ: ಹಸಿರು
  • ಈಶಾನ್ಯ: ಕ್ರೀಮ್‌ ಮತ್ತು ಹಳದಿ.
  • ವಾಯವ್ಯ: ಬಿಳಿ ಮತ್ತು ಕ್ರೀಮ್.
  • ಪೂರ್ವ: ಬಿಳಿ, ಮರದ ಬಣ್ಣಗಳು ಅಥವಾ ತಿಳಿ ನೀಲಿ.

ಮುಖ್ಯ ದ್ವಾರಕ್ಕೆ ಕಪ್ಪು ಬಣ್ಣದ ಪೇಂಟ್ ಮಾಡಬೇಡಿ.

ಇದನ್ನೂ ನೋಡಿ: ವಾಸ್ತು ಪ್ರಕಾರ ನಿಮ್ಮ ಮನೆಗೆ ಸರಿಯಾದ ಬಣ್ಣಗಳು

ಮುಖ್ಯ ದ್ವಾರದಲ್ಲಿ ಮೂರ್ತಿಗಳನ್ನು ಇಡುವುದು

ಪ್ರವೇಶದ ಸ್ಥಳದಲ್ಲಿ ದೇವರು ಮತ್ತು ದೇವತೆಗಳ ಮೂರ್ತಿಗಳು ಮತ್ತು ಚಿತ್ರಗಳನ್ನು ಇಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ, ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಗಣೇಶ ಮತ್ತು ಲಕ್ಷ್ಮಿ ಪ್ರತಿಮೆಗಳು ಮತ್ತು ಫೋಟೋಗಳನ್ನು ಇಡಬಹುದು. ಇವು ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ ಎಂದು ಭಾವಿಸಲಾಗಿದೆ. ತೆಂಗಿನಕಾಯಿ ಇರುವ ಕಲಶದ ಚಿಹ್ನೆಗಳು ಮತ್ತು ಗಣೇಶನನ್ನು ಪ್ರತಿನಿಧಿಸುವ ಸ್ವಸ್ತಿಕದಂತಹ ಮಂಗಳಕರ ಚಿಹ್ನೆಯೊಂದಿಗೆ ಮುಖ್ಯ ದ್ವಾರವನ್ನು ಅಲಂಕರಿಸಬಹುದು.

ಮೆಟ್ಟಿಲುಗಳ ಬಗ್ಗೆ ಗಮನ ಇರಲಿ

ಪ್ರವೇಶದ ಸ್ಥಳದಲ್ಲಿ ಮೆಟ್ಟಿಲುಗಳು ಇದ್ದಲ್ಲಿ, ಬೆಸ ಸಂಖ್ಯೆಯು ಅದೃಷ್ಟ ತರುತ್ತದೆ ಎಂದು ಭಾವಿಸಲಾಗಿದೆ.

ಶೂ ರ್‍ಯಾಕ್‌ಗಳು ಇರಬಾರದು.

ಪ್ರವೇಶ ದ್ವಾರದ ಅಲಂಕಾರಿಕ ಸಾಮಗ್ರಿಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ, ಸಾಮಾನ್ಯವಾಗಿ ಜನರು ಶೂ ರ್ಯಾಕ್‌ಗಳನ್ನೂ ಮನೆಯ ಮುಖ್ಯ ದ್ವಾರದ ಬಳಿ ಅನುಕೂಲಕ್ಕಾಗಿ ಇರಿಸುತ್ತಾರೆ. ಇದು ಶೂಗಳನ್ನು ತೆಗೆದು ಇಡಲು ಅನುಕೂಲ ಮಾಡುತ್ತದೆ. ಇದು ಅನುಕೂಲಕರವಾದರೂ, ಇಂಥ ಹವ್ಯಾಸವನ್ನು ದೂರವಿಡಬೇಕು. ಕಸದತೊಟ್ಟಿಗಳು ಮತ್ತು ಮುರಿದ ಪೀಠೋಪಕರಣದ ವಿಚಾರದಲ್ಲೂ ಇದೇ ನೀತಿ ಅನ್ವಯಿಸುತ್ತದೆ. ಮುಖ್ಯ ದ್ವಾರದ ಹಿಂಬದಿಯಲ್ಲಿ ಸಾಮಗ್ರಿಗಳನ್ನು ನೇತು ಹಾಕಬೇಡಿ.

ಕಸದ ತೊಟ್ಟಿಗಳನ್ನು ದೂರವಿಡಿ

ಮನೆಯ ದ್ವಾರದ ಬಳಿ ಡಸ್ಟ್‌ಬಿನ್ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಬರುತ್ತವೆ. ಇದು ಕುಟುಂಬದ ಆರ್ಥಿಕತೆ ಮತ್ತು ಸಮೃದ್ಧಿಯ ಮೇಲೂ ಪರಿಣಾಮ ಬೀರುತ್ತದೆ. ದ್ವಾರವು ಕಸ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಪ್ರದೇಶದಲ್ಲಿ ಡಸ್ಟ್‌ಬಿನ್ ಇಡಬೇಡಿ.

ಸ್ವತ್ತಿನ ವಿನ್ಯಾಸವನ್ನು ಪರಿಶೀಲಿಸಿ

ದೊಡ್ಡ ನಗರಗಳಲ್ಲಿ ನಿಮ್ಮ ಮನೆಯ ಲೇಔಟ್‌ ಬಗ್ಗೆ ನೀವು ಹೆಚ್ಚಿನ ನಿಯಂತ್ರಣವನ್ನು ಹೊಂದಿರುವುದಿಲ್ಲ. ಆದರೆ, ನೀವು ಸ್ವತ್ತು ಖರೀದಿ ಮಾಡುತ್ತಿದ್ದರೆ, ಮುಖ್ಯ ದ್ವಾರವು ಇನ್ನೊಂದು ಮನೆಯ ಪ್ರವೇಶ ದ್ವಾರದ ಎದುರಿಗೆ ಇರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಸಮಸ್ಯೆಗಳು ಸೃಷ್ಟಿಯಾಗಬಹುದು. ಇನ್ನೊಂದು ವ್ಯಕ್ತಿಯ ಮುಖ್ಯ ದ್ವಾರ ಅಥವಾ ಸಸ್ಯದ ನೆರಳು ಬೀಳುವುದು ಮನೆಗೆ ಒಳ್ಳೆಯದಲ್ಲ.

ಪರಿಸರ ಮತ್ತು ಬಾಗಿಲುಗಳ ವಿಧ

ನಿಮ್ಮ ಮನೆಯ ಮುಖ್ಯ ದ್ವಾರವನ್ನು ಸುಂದರವಾಗಿ ವಿನ್ಯಾಸ ಮಾಡಿದ್ದಲ್ಲಿ ನಿಮ್ಮ ಮನೆಗೆ ಹೆಚ್ಚುವರಿ ಸೌಂದರ್ಯ ನೀಡುತ್ತದೆ. ಆದರೆ, ನಿಮ್ಮ ಮನೆಯ ಪ್ರವೇಶದಲ್ಲಿ ಸ್ಲೈಡ್ ಮಾಡುವ ಬಾಗಿಲುಗಳನ್ನು ಅಳವಡಿಸಬಾರದು. ವೃತ್ತಾಕಾರದ ಬಾಗಿಲುಗಳನ್ನೂ ಬಳಸಬಾರದು. ಅವು ಫ್ಯಾಷನಬಲ್ ಆಗಿ ಕಾಣಬಹುದು. ಆದರೆ, ವಾಸ್ತು ನಿಯಮಗಳಿಗೆ ಇವು ಅನುಸರಣೆಯಾಗುವುದಿಲ್ಲ. ಸರಳ, ಉತ್ತಮ ಗುಣಮಟ್ಟದ ಬಾಗಿಲನ್ನು ಅಳವಡಿಸಿಕೊಳ್ಳಿ. ಮರಕ್ಕೆ ಹೆಚ್ಚಿನ ಆದ್ಯತೆ ಮತ್ತು ಇದು ಯಾವುದೇ ದೋಷವನ್ನು ಸರಿಪಡಿಸುತ್ತದೆ ಎಂದು ಭಾವಿಸಲಾಗುತ್ತದೆ.

ಥ್ರೆಶೋಲ್ಡ್‌ನ ಪ್ರಾಮುಖ್ಯತೆ

ಮುಖ್ಯ ದ್ವಾರದಲ್ಲಿ ಥ್ರೆಶೋಲ್ಡ್‌ ಇರಬೇಕು ಎಂದು ಕೂಡಾ ಶಿಫಾರಸು ಮಾಡಲಾಗಿದೆ. ನೆಲಮಟ್ಟದಲ್ಲೇ ಮನೆ ಇರಬಾರದು. ಹೊರಗಿನ ಋಣಾತ್ಮಕ ಶಕ್ತಿಗಿಂತ ಒಳಗಿನ ಧನಾತ್ಮಕ ಪರಿಸರವನ್ನು ಇದು ಸೂಚಿಸುತ್ತದೆ. ದುಷ್ಟ ಶಕ್ತಿಗಳು ಮನೆಗೆ ಪ್ರವೇಶಿಸುವುದನ್ನು ಈ ಥ್ರೆಶೋಲ್ಡ್‌ ತಡೆಯುವ ಕೆಲಸ ಮಾಡುತ್ತವೆ ಮತ್ತು ಸಂಪತ್ತು ನಷ್ಟವನ್ನೂ ತಡೆಯುತ್ತವೆ. ಮೆಟ್ಟಿಲುಗಳಿದ್ದರೆ, ಇವು ಬೆಸ ಸಂಖ್ಯೆಯಲ್ಲಿ ಇರಬೇಕು.

ಡೋರ್‌ಮ್ಯಾಟ್ ಹಾಕುವುದು

ಡೋರ್‌ಮ್ಯಾಟ್‌ ಅತ್ಯಂತ ಮುಖ್ಯ. ಮನೆಯ ಒಳಗೆ ಬರುವುದಕ್ಕೂ ಮೊದಲು ನಿಮ್ಮ ಕಾಲಿನ ಧೂಳನ್ನು ನೀವು ಒರೆಸಿಕೊಂಡರೆ, ಮನೆಯ ಹೊರಗೇ ಎಲ್ಲ ಋಣಾತ್ಮಕ ಎನರ್ಜಿಯನ್ನು ನೀವು ಬಿಟ್ಟಿದ್ದೀರಿ ಎಂಬುದನ್ನು ಸೂಚಿಸುತ್ತದೆ.

ಸೆಪ್ಟಿಕ್ ಟ್ಯಾಂಕ್‌ಗಳನ್ನು ಇಡುವುದು

ಮುಖ್ಯ ದ್ವಾರದ ಎದುರು ಎಂದಿಗೂ ಸೆಪ್ಟಿಕ್‌ ಟ್ಯಾಂಕ್‌ ಇಡುವುದಿಲ್ಲ.

ಮುಖ್ಯ ದ್ವಾರದ ಎದುರು ಬೆಳಕು

ನಿಮ್ಮ ಮುಖ್ಯ ದ್ವಾರದಲ್ಲಿ ಸಾಕಷ್ಟು ಬೆಳಕು ಇರಬೇಕು. ನಿಮ್ಮ ಮೂಡ್‌ ಸಕ್ರಿಯವಾಗಿರಲು ಬೆಳಕು ಬಳಸಿದ ಹಾಗೆ. ಪ್ರವೇಶ ದ್ವಾರವನ್ನು ಅಲಂಕರಿಸುವ ಉತ್ತಮ ಐಡಿಯಾ ಎಂದರೆ, ಟ್ರೆಂಡಿಂಗ್‌ ಲೈಟ್‌ಗಳನ್ನು ಅಳವಡಿಸಬಹುದಾಗಿದೆ. ವಾರ್ಮ್ ಲೈಟ್‌ಗಳನ್ನು ಬಳಸಿ. ಯಾವತ್ತು ಕಡು, ಮಂದ ಬೆಳಕು ಬಳಸಬೇಡಿ. ಇದು ಸ್ವಾಗತಕಾರಿಯಲ್ಲ. ಅಷ್ಟೇ ಅಲ್ಲ, ಖಿನ್ನತೆಯನ್ನು ಪ್ರೋತ್ಸಾಹಿಸುತ್ತದೆ. ಮುಖ್ಯ ದ್ವಾರದಲ್ಲಿ ಗೀರುಗಳು ಅಥವಾ ಹಾನಿ ಆಗಿದೆಯೇ ಎಂದು ನೋಡಿ. ಯಾಕೆಂದರೆ, ಇವು ಮುಖ್ಯ ದ್ವಾರದಲ್ಲಿ ಇರಬಾರದು. ಬಿರುಕು ಬಿಟ್ಟ ಬಾಗಿಲುಗಳು ಗೌರವ ನಷ್ಟಕ್ಕೆ ಕಾರಣವಾಗಬಹುದು.

ಫಾಯರ್ ಸ್ಪೇಸ್‌

ವಾಸ್ತು ಪ್ರಕಾರ ಫಾಯರ್ ಕೂಡಾ ಮುಖ್ಯವಾಗಿವೆ. ಸುಂದರವಾಗಿ ಅಲಂಕಾರ ಮಾಡಿದ ಫಾಯರ್ ಸ್ಥಳವು ಮನೆ ಮತ್ತು ಮನೆಯಲ್ಲಿ ವಾಸಿಸುತ್ತಿರುವವರಿಗೆ ಅದ್ಭುತವನ್ನೇ ಸೃಷ್ಟಿಸಬಲ್ಲವು. ದುರಾದೃಷ್ಟವಶಾತ್‌ ಇಂದಿನ ನಗರ ಪ್ರದೇಶಗಳಲ್ಲಿ ಸ್ಥಳದ ಕೊರತೆಯಿಂದ ಎಲ್ಲರಿಗೂ ಇಂತಹ ಅನುಕೂಲ ಸಿಗುವುದಿಲ್ಲ. ಆದರೆ, ಸಾಧ್ಯವಿದ್ದಲ್ಲಿ, ಮನೆಗೆ ಸೂಕ್ತ ಸ್ಥಾನವೆಂದರೆ ಸಣ್ಣ ಪ್ಯಾಸೇಜ್‌ ನಿಧಾನವಾಗಿ ಅಗಲದ ಸ್ಥಳವಾಗಿ ಅಗಲವಾಗಿ, ನಿಮ್ಮ ಮನೆಗೆ ತಲುಪುವಂತಿರಬೇಕು.

ದೋಷಯುಕ್ತ ಬಾಗಿಲುಗಳನ್ನು ತೆಗೆದುಹಾಕಿ

ಮುಖ್ಯ ಬಾಗಿಲಿನ ಮೇಲೆ ಡೆಂಟ್ ಅಥವಾ ಗೀರುಗಳು ಇವೆಯೇ ಎಂದು ಪರಿಶೀಲಿಸಿ. ಬಿರುಕು ಬಿಟ್ಟ ಬಾಗಿಲುಗಳು ಗೌರವವನ್ನು ಕಡಿಮೆ ಮಾಡಬಹುದು. ಮನೆಯ ಪ್ರವೇಶ ದ್ವಾರವು ಹಾನಿಗೊಳಗಾಗಿದ್ದರೆ ಅಥವಾ ಬಿರುಕುಗಳನ್ನು ಹೊಂದಿದ್ದರೆ, ನೀವು ತಕ್ಷಣ ಅದನ್ನು ಬದಲಾಯಿಸಿ. ಮುರಿದ, ಒಡೆದ ಬಾಗಿಲುಗಳನ್ನು ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ. ಅದು ಕುಟುಂಬದ ಸದಸ್ಯರ ಆರ್ಥಿಕ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ಕನ್ನಡಿ

ಮನೆಯ ಪ್ರವೇಶ ದ್ವಾರವನ್ನು ಅಲಂಕರಿಸುವಾಗ ಕನ್ನಡಿಯನ್ನು ಇಡುವುದು ಅತ್ಯಂತ ಸಾಮಾನ್ಯ. ಆದರೆ, ಕನ್ನಡಿಗಳನ್ನು ಅಳವಡಿಸುವಾಗ ಅಥವಾ ಪ್ರವೇಶ ದ್ವಾರದಲ್ಲಿ ಇಂತಹ ಸಾಮಗ್ರಿಗಳನ್ನು ಇಡುವಾಗ ವಾಸ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಮುಖ್ಯ ದ್ವಾರದ ಎದುರು ಎಂದಿಗೂ ಕನ್ನಡಿ ಇಡಬೇಡಿ.

ಇದನ್ನೂ ನೋಡಿ: ಮನೆ ಅಲಂಕಾರದಲ್ಲಿ ಕನ್ನಡಿಗಳನ್ನು ಬಳಸುವುದು ಹೇಗೆ

ಮನೆ ಪ್ರವೇಶದ ವಾಸ್ತು: ಮುಖ್ಯ ದ್ವಾರ ಮತ್ತು ಅದರ ಗೋಚರತೆ

ವಾಸ್ತು ಶಾಸ್ತ್ರ ಮತ್ತು ಫೆಂಗ್‌ ಶುಯಿ ಪ್ರಕಾರ ಮುಖ್ಯ ದ್ವಾರ ಪ್ರಾಮುಖ್ಯ ಸ್ಥಳದಲ್ಲಿರಬೇಕು, ಕಾಣಿಸುವಂತಿರಬೇಕು ಮತ್ತು ಸುಲಭವಾಗಿ ಗುರುತಿಸುವ ಹಾಗಿರಬೇಕು. ನಿಮ್ಮ ಮನೆಯ ಸಂಖ್ಯೆಯನ್ನು ಅಥವಾ ನಿಮ್ಮ ಹೆಸರನ್ನು ಹಾಕುವುದು ಮನೆಯ ಪ್ರವೇಶ ದ್ವಾರ ವಿಶಿಷ್ಟವಾಗಿ ಕಾಣಿಸುವಂತೆ ಮಾಡುವುದಕ್ಕೆ ಉತ್ತಮ ವಿಧಾನಗಳಾಗಿವೆ. ಆಭರಣ, ಕೆತ್ತನೆಯ ಬದಲಿಗೆ ಬಾಗಿಲಿನ ಮೇಲೆ ಸರಳ ನೇಮ್‌ ಪ್ಲೇಟ್‌ ಹಾಕುವುದು ಕೂಡಾ ಉತ್ತಮ.

Main door design

Source: Pexels

ಮುಖ್ಯ ದ್ವಾರವು ಏಳು ಅಡಿ ಎತ್ತರ ಮತ್ತು ಮೂರು ಅಡಿ ಅಗಲವಿರಬೇಕು. ದೊಡ್ಡ ಬಾಗಿಲುಗಳು ಮನೆಗೆ ಹೆಚ್ಚು ಶಕ್ತಿಯನ್ನು ತರುತ್ತವೆ. ಹೀಗಾಗಿ, ಸಣ್ಣ ಬಾಗಿಲುಗಳು ಬೇಡ. ಹಾಗೆಯೇ, ಮನೆಯ ಬೇರೆ ಎಲ್ಲ ಬಾಗಿಲುಗಳು ಇದಕ್ಕಿಂತ ಕಡಿಮೆ ಎತ್ತರದಲ್ಲಿರಲಿ. ಹಿಂದಿನ ಬಾಗಿಲನ್ನು ಮಾಲೀಕರು ಬಳಸಬಾರದು. ಇದನ್ನು ಮನೆ ಕೆಲಸದವರು ಅಥವಾ ಇತರ ಸಿಬ್ಬಂದಿ ಬಳಸಬೇಕು.

ಇದನ್ನೂ ನೋಡಿ: ವಾಸ್ತು ಶಾಸ್ತ್ರ ಸಲಹೆಗಳು ದೇಗುಲ ಮನೆ

ಮನೆ ಪ್ರವೇಶದ ವಾಸ್ತು: ವಾಸ್ತು ಪ್ರಕಾರ ಮುಖ್ಯ ದ್ವಾರಕ್ಕೆ ಯಾವ ಸಾಮಗ್ರಿ ಸೂಕ್ತ?

ಯಾವುದೇ ದಿಕ್ಕಿನಲ್ಲೂ ಮುಖ್ಯ ದ್ವಾರಕ್ಕೆ ಮರದ ಬಾಗಿಲು ಅತ್ಯಂತ ಮಂಗಳಕರ. ಆದರೆ, ನಿಮ್ಮ ಮುಖ್ಯ ದ್ವಾರ ದಕ್ಷಿಣ ದಿಕ್ಕಿನಲ್ಲಿ ಇದ್ದರೆ, ಮರ ಮತ್ತು ಲೋಹದ ಸಂಯೋಜನೆಯನ್ನು ಬಾಗಿಲು ಹೊಂದಿರಬೇಕು, ಇದೇ ರೀತಿ, ಬಾಗಿಲು ಪಶ್ಚಿಮಕ್ಕಿದ್ದರೆ, ಇದು ಲೋಹದ ಕುಸುರಿ ಹೊಂದಿರಬೇಕು. ಉತ್ತರ ದಿಕ್ಕಿನಲ್ಲಿರುವ ಮುಖ್ಯ ದ್ವಾರವು ಬೆಳ್ಳಿ ಬಣ್ಣದಲ್ಲಿರಬೇಕು ಮತ್ತು ನಿಮ್ಮ ಮುಖ್ಯ ದ್ವಾರವು ಪೂರ್ವ ದಿಕ್ಕಿಗೆ ಇದ್ದರೆ, ಮರದಿಂದ ಮಾಡಿರಬೇಕು ಮತ್ತು ಸೀಮಿತ ಲೋಹದ ಸಾಮಗ್ರಿಗಳನ್ನು ಬಳಸಿ ಅಲಂಕಾರ ಮಾಡಿರಬೇಕು.

Main door

Source: Pexels

ಮನೆ ಪ್ರವೇಶ ಅಲಂಕಾರಕ್ಕೆ ವಾಸ್ತು:  ಮುಖ್ಯ ದ್ವಾರದ ಪ್ರದೇಶದಲ್ಲಿ ಅಲಂಕಾರ ಮಾಡುವುದು

ಸ್ವಚ್ಛತೆ, ಅದರಲ್ಲೂ ಮುಖ್ಯ ದ್ವಾರದ ಬಳಿ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಕಸದತೊಟ್ಟಿಗಳು, ಮುರಿದ ಕುರ್ಚಿಗಳು ಅಥವಾ ಸ್ಟೂಲ್‌ಗಳನ್ನು ಮುಖ್ಯ ಬಾಗಿಲ ಬಳಿ ಇಡಬಾರದು ಎಂದು ಮುಂಬೈನ ತಜ್ಞ ಕಾಜಲ್‌ ರೋಹಿರಾ ಹೇಳುತ್ತಾರೆ.

Read also : ಪ್ಯಾನ್ ಕಾರ್ಡ್‌ನಲ್ಲಿ ಫೋಟೋ ಮತ್ತು ಸಹಿಯನ್ನು ಬದಲಾಯಿಸುವುದು ಹೇಗೆ?

“ಮುಖ್ಯ ದ್ವಾರದ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಬೆಳಕು ಇರಬೇಕು. ಮುಖ್ಯ ದ್ವಾರದ ವಿರುದ್ಧ ದಿಕ್ಕಿನಲ್ಲಿ ಎಂದಿಗೂ ಕನ್ನಡಿ ಇಡಬೇಕು. ಇದು ಮುಖ್ಯ ದ್ವಾರವನ್ನು ಪ್ರತಿಫಲಿಸುವಂತೆ ಇರಬಾರದು. ಇದರಿಂದ ಶಕ್ತಿ ಹಿಂತಿರುಗುತ್ತದೆ ಎಂದು ರೋಹಿರಾ ಹೇಳುತ್ತಾರೆ.

ದೆಹಲಿಯ ಗೃಹಿಣೀ ತಾನ್ಯಾ ಸಿನ್ಹಾ ಹಲವು ಫ್ಲಾಟ್‌ಗಳನ್ನು ಇದೇ ಕಾರಣಕ್ಕೆ ನಿರಾಕರಿಸಿದ್ದಾರೆ. ಯಾಕೆಂದರೆ, ಮನೆಯ ಮುಖ್ಯ ದ್ವಾರವು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಇರಲಿಲ್ಲ. ಂತರ ಪೂರ್ವ ದಿಕ್ಕಿನಲ್ಲಿ ಪ್ರವೇಶ ದ್ವಾರ ಇರುವ ಮನೆಯನ್ನು ಅವರು ಖರೀದಿ ಮಾಡಿದರು. “ನನ್ನ ಮನೆಯ ಮುಖ್ಯ ದ್ವಾರವನ್ನು ಕಲಾತ್ಮಕವಾಗಿ ವಿನ್ಯಾಸ ಮಾಡಲಾಗಿದೆ. ಮ್ಯಾಟ್ ಗೋಲ್ಡ್‌ ಫಿನಿಶ್‌ ಇದೆ. ಇದರಲ್ಲಿ ಸ್ವಸ್ತಿಕ ಚಿತ್ರವನ್ನು ಕೆತ್ತನೆ ಮಾಡಲಾಗಿದೆ ಮತ್ತು ಚಿನ್ನದ ಬಣ್ಣದ ನೇಮ್‌ಪ್ಲೇಟ್ ಇದೆ. ಮುಖ್ಯ ದ್ವಾರವು ಮುಕ್ತವಾಗಿ ಸ್ವಾಗತ ನೀಡುತ್ತದೆ ಮತ್ತು ಪ್ರವೇಶ ದ್ವಾರದಲ್ಲಿ ನಾನು ಸುಂದರವಾದ ಹಳದಿ ಲ್ಯಾಂಟರ್ನ್‌ ಇಟ್ಟಿದ್ದೇನೆ” ಎಂದು ಅವರು ವಿವರಿಸಿದ್ದಾರೆ.

Ornamental main door

Source: Pexels

ಮುಖ್ಯ ದ್ವಾರ ಎಂದಿಗೂ ಅಡಿಪಟ್ಟಿ ಹೊಂದಿರಬೇಕು (ಇದು ಮಾರ್ಬಲ್‌ ಅಥವಾ ಮರದ್ದಾಗಿರಬಹುದು). ಇದು ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸಲು ಅನುವು ಮಾಡುತ್ತದೆ ಎಂದು ಊಹಿಸಲಾಗಿದೆ. ವಾಸ್ತು ಪ್ರಕಾರ, ಕುಲದೇವತೆಯ ಚಿತ್ರವನ್ನು ಮುಖ್ಯ ದ್ವಾರದ ಮೇಲೆ ಅಂಟಿಸುವುದು ಮಂಗಳಕರ ಎಂದು ಭಾವಿಸಲಾಗಿದೆ. ಹಾಗೆಯೇ, ಸಾಂಪ್ರದಾಯಿಕ ರಕ್ಷಕ ಚಿತ್ರಗಳನ್ನು ಕೆತ್ತಿಸಬಹುದು. ಹಾಗೆಯೇ, ಶಂಖ ಮತ್ತು ಪದ್ಮನಿಧಿ ಚಿತ್ರಗಳು, ನಾಣ್ಯ ನೀಡುತ್ತಾ ಲಕ್ಷ್ಮಿಯು ಕಮಲದ ಮೇಲೆ ಆನೆಗಳ ಜೊತೆಗೆ ಕುಳಿತಿರುವುದು, ಧಾತ್ರಿ, ಕರುವಿನೊಂದಿಗಿನ ಆಕಳು, ಗಿಳಿಯೊಂದಿಗೆ ಹಕ್ಕಿ, ನವಿಲುಗಳು ಅಥವಾ ಹಂಸಗಳ ಚಿತ್ರಗಳನ್ನು ಬಳಸಬಹುದು.

  • ಧನಾತ್ಮಕ ಎನರ್ಜಿಗಳನ್ನು ಆಕರ್ಷಿಸಲು ಮನೆಯ ಪ್ರವೇಶದ ಸ್ಥಳದಲ್ಲಿ ಮಂಗಳಕರ ಚಿಹ್ನೆಗಳನ್ನು ಹಾಕುವುದು ಅತ್ಯಂತ ಉತ್ತಮ ಐಡಿಯಾ ಆಗಿದೆ.
  • ಓಮ್‌, ಸ್ವಸ್ತಿಕಾ, ಕ್ರಾಸ್‌ ಇತ್ಯಾದಿ ದಿವ್ಯ ಚಿಹ್ನೆಗಳನ್ನು ಮುಖ್ಯ ಬಾಗಿಲಿನಲ್ಲಿ ಹಾಕಿ ಅಲಂಕರಿಸಿ ಮತ್ತು ನೆಲದ ಮೇಲೆ ರಂಗೋಲಿ ಹಾಕಿ. ಇವನ್ನು ಮಂಗಳಕರ ಎಂದು ಪರಿಗಣಿಸಲಾಗಿದೆ ಮತ್ತು ಅದೃಷ್ಟವನ್ನು ತರುತ್ತವೆ.
  • ಫೆಂಗ್‌ ಶುಯಿ ಪ್ರಕಾರ, 3 ಹಳೆಯ ಚೈನೀಸ್‌ ನಾಣ್ಯಗಳನ್ನು ಕೆಂಪು ರಿಬ್ಬನ್‌ನಲ್ಲಿ ಕಟ್ಟಿ ಬಾಗಿಲಿನ ಹಿಡಿಕೆಗೆ ಒಳಗಿನಿಂದ ಕಟ್ಟಿ. ಇದು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ. ಮನೆಯ ಒಳಗೆ ಇದು ಸಂಪತ್ತನ್ನು ಇದು ಸೂಚಿಸುತ್ತದೆ.
  • ಮನೆಯ ಪ್ರವೇಶದ್ವಾರದಲ್ಲಿ ಬುದ್ಧನ ಪ್ರತಿಮೆಯನ್ನು ಇರಿಸಿ. ಅದು ಕುಟುಂಬದ ಸದಸ್ಯರಿಗೆ ಅದೃಷ್ಟ, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.
  • ಮನೆಯಲ್ಲಿ ಶುದ್ಧತೆ ಮತ್ತು ಸಕಾರಾತ್ಮಕತೆಯನ್ನು ಆಹ್ವಾನಿಸಲು ವಾತಾವರಣವನ್ನು ಹೂವಿನ ದಳಗಳೊಂದಿಗೆ ನೀರಿನ ಬಟ್ಟಲನ್ನು ಇರಿಸುವ ಮೂಲಕ ಮುಖ್ಯ ಬಾಗಿಲಿನ ಪ್ರದೇಶವನ್ನು ಅಲಂಕರಿಸಿ.
  • ಪ್ರವೇಶ ದ್ವಾರದ ಬಳಿ ಲಿವಿಂಗ್ ರೂಮಿನಲ್ಲಿ ಮಂಗಳಕರವಾದ ವರ್ಣಚಿತ್ರಗಳನ್ನು ನೇತುಹಾಕಿ. ನೀವು ಹೂವುಗಳು, ಸುಂದರವಾದ ದೃಶ್ಯಾವಳಿ, ಜಲಪಾತ ಅಥವಾ ಸೂರ್ಯೋದಯದಂತಹ ವರ್ಣಚಿತ್ರಗಳನ್ನು ಇರಿಸಬಹುದು.
  • ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ಆಹ್ವಾನಿಸಲು ವಿಂಡ್ ಚೈಮ್‌ಗಳನ್ನು ನೇತುಹಾಕಿ.

ಆಗ್ನೇಯ ಮತ್ತು ನೈಋತ್ಯ ಪ್ರವೇಶ ದ್ವಾರಕ್ಕೆ ವಾಸ್ತುಶಾಸ್ತ್ರದ ಪರಿಹಾರಗಳು

ವಾಸ್ತು ಪ್ರಕಾರ ಆಗ್ನೇಯ ಪ್ರವೇಶ ಮತ್ತು ನೈಋತ್ಯ ಪ್ರವೇಶವನ್ನು ವಾಸ್ತು ದೋಷ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಕೆಲವು ಸರಳ ಪರಿಹಾರಗಳಿವೆ. ಆದರೆ, ವಾಸ್ತು ಪರಿಣಿತರನ್ನು ಸಂಪರ್ಕಿಸುವುದು ಮತ್ತು ಮುಖ್ಯ ದ್ವಾರದ ವಾಸ್ತು ದೋಷದ ಬಗ್ಗೆ ಅವರಿಂದ ಸಲಹೆ ಪಡೆಯುವುದು ಉತ್ತಮ.

ಕಡು ಕೆಂಪು ಅಥವಾ ಬೂದು ಬಣ್ಣದ ಕರ್ಟನ್‌ಗಳನ್ನು ಆಗ್ನೇಯ ಪ್ರವೇಶದ ಕಡೆಗೆ ಹಾಕಿ. ವಾಸ್ತು ಶಾಸ್ತ್ರದ ಪ್ರಕಾರ, 9 ರೆಡ್‌ ಕಾರ್ನೆಲಿಯನ್‌ ಜೆಮ್‌ಸ್ಟೋನ್‌ ಅನ್ನು ಆಗ್ನೇಯ ದಿಕ್ಕಿನ ಕಡೆಗಿರುವ ಗೇಟ್‌ಗೆ ಹಾಕಿದರೆ, ಜಾಗದಲ್ಲಿರುವ ದೋಷನಿವಾರಣೆಗೆ ಸಹಾಯವಾಗುತ್ತದೆ. ಅಷ್ಟೇ ಅಲ್ಲ, ಆಗ್ನೇಯ ದಿಕ್ಕಿನ ಮನೆಗಳ ಋಣಾತ್ಮಕ ಪರಿಣಾಮವನ್ನು ಕಡಿಮೆ ಮಾಡಲೂ ಇದು ಸಹಾಯ ಮಾಡುತ್ತದೆ. ಒಂದು ವಾಸ್ತು ಪಿರಾಮಿಡ್‌ ಅನ್ನು ಮುಖ್ಯ ದ್ವಾರದ ಮೇಲೆ ಮಧ್ಯಭಾಗದಲ್ಲಿ ಇಡಬಹುದು. ಇತರ ಎರಡು ಪಿರಾಂಇಡ್‌ಗಳನ್ನು ಬಾಗಿಲಿನ ಎರಡೂ ಬದಿಗೆ ಇಡಬಹುದು.

ಆಗ್ನೇಯ ಪ್ರವೇಶ ದ್ವಾರದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, ಮುಖ್ಯ ದ್ವಾರದ ಬದಿಗಳಲ್ಲಿ ಮತ್ತು ಮೇಲ್ಭಾಗದಲ್ಲಿ ಓಮ್‌, ತ್ರಿಶೂಲ ಮತ್ತು ಸ್ವಸ್ತಿಕ ಚಿಹ್ನೆಗಳನ್ನು ಪೇಂಟ್ ಮಾಡಿ ಅಥವಾ ಸ್ಟಿಕರ್‌ಗಳನ್ನು ಇಡಿ. ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು, ಮುಖ್ಯ ದ್ವಾರದ ಸುತ್ತ ಸಸ್ಯಗಳನ್ನು ಇಡಿ ಮತ್ತು ಗಾಳಿ ಚೈಮ್‌ಗಳನ್ನು ನೇತು ಹಾಕಿ. ಹಾಗೆಯೇ, ಗಾಯತ್ರಿ ಮಂತ್ರವನ್ನು ಬರೆಯಬಹುದು ಅಥವಾ ಮಂತ್ರದ ಸಣ್ಣ ಸ್ಟಿಕ್ಕರ್ ಅನ್ನು ಕೂಡ ಮುಖ್ಯ ದ್ವಾರದ ಬಳಿಯಲ್ಲಿ ಅಂಟಿಸಬಹುದು. ಪಂಚಮುಖಿ ಹನುಮಾನ ನಿಂತಿರುವ ಭಂಗಿಯಲ್ಲಿರುವ ಚಿತ್ರವನ್ನು ಇಡಿ. ಮುಖ್ಯ ದ್ವಾರದ ಮಧ್ಯದಲ್ಲಿ ಮೇಲೆ ಆತ ಎಡಗೈಯಲ್ಲಿ ಗದೆಯನ್ನು ಹಿಡಿದಿರಬೇಕು.

ಮನೆ ಪ್ರವೇಶದ ವಾಸ್ತು: ಮುಖ್ಯ ದ್ವಾರದ ದೋಷಗಳಿಗೆ ಪರಿಹಾರಗಳು

ಅಪ್ರದಕ್ಷಿಣಾಕಾರವಾಗಿ ಬಾಗಿಲು ತೆರೆಯುವಂತಿದ್ದರೆ ಅದು ವಾಸ್ತು ದೋಷವಾಗಿರುತ್ತದೆ. ಮೂರು ತಾಮ್ರದ ಪಿರಾಮಿಡ್ ಅನ್ನು ಪ್ರದಕ್ಷಿಣಾಕಾರದ ಬಾಣದ ಗುರುತಿನೊಂದಿಗೆ ಇಟ್ಟರೆ, ಪ್ರವೇಶ ದ್ವಾರದಲ್ಲಿನ ದೋಷ ಪರಿಹಾರವಾಗುತ್ತದೆ.

ಎರಡು ಮನೆಗಳ ಮುಖ್ಯ ಪ್ರವೇಶ ದ್ವಾರಗಳು ಒಂದಕ್ಕೊಂದು ಮುಖವಾಗಿ ಇರಬಾರದು ಎಂದು ವಾಸ್ತು ಹೇಳುತ್ತದೆ. ಕುಂಕುಮವನ್ನು ಬಳಸಿ ಸ್ವಸ್ತಿಕವನ್ನು ಬರೆಯುವುದರಿಂದ ಮುಖ್ಯ ದ್ವಾರದಲ್ಲಿನ ವಾಸ್ತು ದೋಷ ನಿವಾರಣೆಯಾಗುತ್ತದೆ.

ವಾಸ್ತು ಪ್ರಕಾರ, ಅಡುಗೆಮನೆಯು ಮನೆಯ ಮುಖ್ಯದ್ವಾರದ ಕಡೆಗೆ ಮುಖ ಮಾಡಿರಬಾರದು. ವಾಸ್ತು ದೋಷವನ್ನು ಕಡಿಮೆ ಮಾಡಲು, ಸಣ್ಣ ಕ್ರಿಸ್ಟಲ್‌ ಚೆಂಡನ್ನು ಮುಖ್ಯ ದ್ವಾರ ಮತ್ತು ಅಡುಗೆ ಮನೆ ಬಾಗಿಲಿನ ಮಧ್ಯ ಇಡಬೇಕು.

ಲಾಕ್‌ಗಳು ಮತ್ತು ಕೀಗಳಿಗೆ ಮುಖ್ಯ ದ್ವಾರದ ವಾಸ್ತು

ಮನೆಯ ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪ್ರವೇಶದ್ವಾರವು ಧನಾತ್ಮಕ ಶಕ್ತಿ, ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಮತ್ತು ಆಹ್ವಾನಿಸುತ್ತದೆ. ಮುಖ್ಯ ದ್ವಾರದ ಲಾಕ್‌ ಸರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮುಖ್ಯ ದ್ವಾರವು ಪೂರ್ವದ ಕಡೆಗೆ ಇದ್ದರೆ, ತಾಮ್ರದ ಬೀಗವನ್ನು ಬಳಸಿ. ಪಶ್ಚಿಮ ದಿಕ್ಕಿನ ಮುಖ್ಯ ಬಾಗಿಲಿಗೆ, ಕಬ್ಬಿಣದ ಲಾಕ್‌ಗಳು ಉತ್ತಮ. ಯಾಕೆಂದರೆ ಈ ಪ್ರದೇಶವು ಶನಿದೇವರನ್ನು ಪ್ರತಿನಿಧಿಸುತ್ತದೆ. ಉತ್ತರಕ್ಕೆ ಹಿತ್ತಾಳೆ ಲಾಕ್‌ಗಳನ್ನು ಬಳಸಿ. ಮುಖ್ಯ ದ್ವಾರವು ದಕ್ಷಿಣಕ್ಕೆ ಇದ್ದರೆ, ಪಂಚಧಾತುವಿನ ಲಾಕ್‌ ಬಳಸಿ.

ತುಕ್ಕು ಹಿಡಿದ ಅಥವಾ ಒಡೆದಿರುವ ಲಾಕ್‌ಗಳು ಮತ್ತು ಕೀಗಳನ್ನು ಬಳಸಬಾರದು ಮತ್ತು ತಕ್ಷಣವೇ ಅವುಗಳನ್ನು ಎಸೆಯಬೇಕು. ಶಕ್ತಿಯ ಸಮತೋಲನವನ್ನು ಸಾಧಿಸಲು ಮರದ ಕೀ ಚೈನ್‌ಗಳನ್ನು ಬಳಸಬಹುದು. ಮೂಳೆಗಳು, ಪಿಸ್ತೂಲುಗಳು, ಚಾಕುಗಳು, ಕತ್ತರಿಗಳು ಇತ್ಯಾದಿ ಆಕಾರದ ಕೀ ಚೈನ್‌ಗಳನ್ನು ಬಳಸಬೇಡಿ. ಆಮೆಗಳು, ಹೂವುಗಳು, ಆನೆಗಳು ಇತ್ಯಾದಿ ಮಂಗಳಕರ ಚಿಹ್ನೆಗಳು ಇರುವ ಕೀ ಚೈನ್‌ಗಳನ್ನು ಬಳಸಿ. ಕೀಹೋಲ್ಡರ್‌ ಅನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಮಾಸ್ಟರ್ ಬೆಡ್‌ರೂಮ್‌ನಲ್ಲಿ ಉತ್ತರಕ್ಕೆ ಅಥವಾ ಪೂರ್ವದ ಮೂಲೆಯಲ್ಲಿ ಕೀಹೋಲ್ಡರ್‌ ಇಡುವುದು ಹೆಚ್ಚು ಸೂಕ್ತ. ಸರಿಯಾದ ಕೀ ಸ್ಟಾಂಡ್‌ನಲ್ಲೇ ಕೀಗಳನ್ನು ಇಡಿ. ಇದನ್ನು ಡೈನಿಂಗ್‌ ಟೇಬಲ್‌ ಮೇಲೆ, ಶೂ ರ್‍ಯಾಕ್‌ ಮೇಲ್ಬಾಗದಲ್ಲಿ ಇಡಬಹುದು. ಇದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ಇದನ್ನೂ ಓದಿ: ಬೆಡ್‌ರೂಮ್‌ಗೆ ವಾಸ್ತು ಸಲಹೆಗಳು

ಮುಖ್ಯ ಬಾಗಿಲಿನ ವಾಸ್ತು: ಮುಖ್ಯ ಬಾಗಿಲನ್ನು ತೋರಣದಿಂದ ಅಲಂಕರಿಸಲು ಸಲಹೆಗಳು

ವಾಸ್ತು ಪ್ರಕಾರ, ಮುಖ್ಯ ಬಾಗಿಲಿನಲ್ಲಿ ತೋರಣವು ಮಂಗಳಕರವಾಗಿದೆ ಮತ್ತು ಇದು ಅದೃಷ್ಟವನ್ನು ಆಹ್ವಾನಿಸುತ್ತದೆ. ತೋರಣ ಎಂಬುದು ಸಂಸ್ಕೃತ ಪದವಾಗಿದ್ದು, ಇದು ಸಾಗುವುದು ಎಂದು ಅರ್ಥವನ್ನು ನೀಡುತ್ತದೆ. ಮುಖ್ಯ ಬಾಗಿಲಿನಲ್ಲಿ ತೋರಣವು ಮನೆಯ ಶಕ್ತಿಗಳ ಸಮತೋಲನ ಸಾಧಿಸುತ್ತದೆ ಮತ್ತು ಮನೆಯ ಒಳಗೆ ಯಾವುದೇ ದುಷ್ಟ ಶಕ್ತಿ ಪ್ರವೇಶಿಸಲು ಅನುವು ಮಾಡುವುದಿಲ್ಲ.

  • ಮಾವಿನ ಎಲೆಗಳು ಮತ್ತು ಮಾರಿಗೋಲ್ಡ್‌ ಹೂವಿನಿಂದ ಮಾಡಿದ ತೋರಣವನ್ನು ಮುಖ್ಯ ದ್ವಾರಕ್ಕೆ ಹಾಕಿ. ಇದು ಸಂಪತ್ತು ಮತ್ತು ಶಾಂತಿಯನ್ನು ಆಹ್ವಾನಿಸುತ್ತದೆ. ಎಲೆಗಳು ಮತ್ತು ಹೂವು ಒಣಗಿದಾಗ ಬದಲಿಸಿ.
  • 108 ಪಂಚಮುಖಿ ರುದ್ರಾಕ್ಷಿಯನ್ನು ಬಳಸಿ ಅಲಂಕರಿಸಿದ ತೋರಣವು ಅಧ್ಯಾತ್ಮಿಕ ಹಾಗೂ ಪ್ರಾಪಂಚಿಕ ಯಶಸ್ಸನ್ನು ಪಡೆಯಲು ಸಹಾಯ ಮಾಡುತ್ತದೆ.
  • ಅಶೋಕ ಎಲೆಗಳಿಂದ ತಯಾರಿಸಿದ ತೋರಣವು ದುಷ್ಟಶಕ್ತಿಯನ್ನು ನಿವಾರಿಸುತ್ತದೆ.
  • ವಾಸ್ತುದೋಷವನ್ನು ನಿವಾರಿಸಲು ಮತ್ತು ಅದೃಷ್ಟವನ್ನು ತರಲು ಸೀಶೆಲ್‌ಗಳಿಂದ ಮಾಡಿದ ತೋರವನ್ನೂ ಮುಖ್ಯ ದ್ವಾರಕ್ಕೆ ಹಾಕಬಹುದು.

ಬಟ್ಟೆ, ಹವಳಗಳು, ಸಣ್ಣ ಬೆಲ್‌ಗಳನ್ನು ಹೊಂದಿರುವ ಶುಭ ಲಾಭ ತೋರಣ, ಕಳಶ ಮತ್ತು ಸ್ವಸ್ತಿಕಾ ವಿನ್ಯಾಸ ಇರುವ ತೋರಣ ಸೇರಿದಂತೆ ವಿವಿಧ ರೀತಿಯ ತೋರಣ ಸಿಗುತ್ತದೆ. ಹಳದಿ, ಕಿತ್ತಳೆ, ಕೆಂಪು ಮತ್ತು ಹಸಿರು ಬಣ್ಣದಂತಹ ಮಂಗಳಕರ ಬಣ್ಣದ ತೋರಣಗಳನ್ನು ಬಳಸಿ.

 

ವಾಸ್ತು ಪ್ರಕಾರ ಮುಖ್ಯ ಬಾಗಿಲಿನ ಬಣ್ಣ

ಕಮಾನು ಇರುವ ಮುಖ್ಯ ದ್ವಾರ

ಕಮಾನು ಇರುವ ಬಾಗಿಲು ನಿಮ್ಮ ಮನೆಗೆ ಕ್ಲಾಸಿಕ್‌ ಲುಕ್ ನೀಡುತ್ತದೆ. ಮರದಿಂದ ಮಾಡಿದ ಕಮಾನನ್ನು ನೀವು ಬಳಸಬಹುದು. ಮಂಗಳಕರ ಚಿಹ್ನೆಗಳು, ಸಸ್ಯಗಳು ಮತ್ತು ಸೂಕ್ತವಾದ ಲೈಟಿಂಗ್‌ ಬಳಸಿ ಮುಂದಿನ ಬಾಗಿಲಿನ ಪ್ರದೇಶವನ್ನು ಅಲಂಕರಿಸಿ.

ಆಕರ್ಷಕ ಬಾಗಿಲಿನ ಹಿಡಿಕೆಗಳನ್ನು ಹೊಂದಿರುವ ಮುಖ್ಯ ದ್ವಾರ

ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಬಾಗಿಲ ಹಿಡಿಕೆಗಳು ಲಭ್ಯವಿವೆ. ನೀವು ಸಮಕಾಲೀನ ಬಾಗಿಲ ಹಿಡಿಕೆಗಳ ವಿನ್ಯಾಸವನ್ನು ಬಲಸಬಹುದು ಅಥವಾ ಪುರಾತನ ಶೈಲಿಯ ಬಾಗಿಲ ಹಿಡಿಕೆಗಳನ್ನು ಬಳಸಬಹುದು.

ದಕ್ಷಿಣ ದಿಕ್ಕಿನ ವಾಸ್ತು ನಿಯಮಗಳ ಪ್ರಕಾರ, ಹಿತ್ತಾಳೆ ಹಿಡಿಕೆಗಳು ದಕ್ಷಿಣ ದಿಕ್ಕಿನ ಮರದ ಬಾಗಿಲುಗಳಿಗೆ ಉತ್ತಮ ಆಯ್ಕೆಯಾಗಿದೆ.  ಪಶ್ಚಿಮ ದಿಕ್ಕಿಗೆ ಬಾಗಿಲು ಇದ್ದಲ್ಲಿ, ಲೋಹದ ಬಾಗಿಲ ಹಿಡಿಕೆಗಳನ್ನು ಬಳಸಿ. ಮನೆ ಪ್ರವೇಶ ಪೂರ್ವಕ್ಕೆ ಇದ್ದಲ್ಲಿ, ಮರ ಮತ್ತು ಲೋಹದ ಸಂಯೋಜನೆಯನ್ನು ವಾಸ್ತು ಶಿಫಾರಸು ಮಾಡುತ್ತದೆ. ಉತ್ತರ ದಿಕ್ಕಿಗೆ ಬಾಗಿಲುಗಳು ಇದ್ದರೆ ಬೆಳ್ಳಿ ಸೂಕ್ತವಾಗಿದೆ.

ಮರದ ಬಾಗಿಲ ಕೆತ್ತನೆಗಳು

ಮರದ ಬಾಗಿಲಿನ ಕೆತ್ತನೆ ಮಾಡುವುದು ಪುರಾತನ ಸಂಪ್ರದಾಯವಾಗಿದೆ. ದೇವರು ಮತ್ತು ದೇವತೆಗಳ ಕೆತ್ತನೆಯನ್ನು ಮಾಡಿ ನಿಮ್ಮ ಮುಖ್ಯ ದ್ವಾರಕ್ಕೆ ಸಮಕಾಲೀನ ಸ್ಪರ್ಶವನ್ನು ನೀಡಬಹುದು. ಓಂ, ಸ್ವಸ್ತಿಕಾ ಮತ್ತು ಕ್ರಾಸ್‌ನಂತಹ ವಿನ್ಯಾಸಗಳನ್ನು ನೀವು ಅಳವಡಿಸಬಹುದು. ಮುಖ್ಯ ದ್ವಾರದ ವಾಸ್ತು ಪ್ರಕಾರ, ಇದು ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ಮನೆಗೆ ತರುತ್ತದೆ.

ಮನೆ ಪ್ರವೇಶಕ್ಕೆ ವಾಸ್ತು: ನಿಮ್ಮ ಮನೆಯನ್ನು ನವೀಕರಿಸುವಾಗ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿರುವುದಕ್ಕೆ ಸರಳ ವಿಧಾನಗಳು

ಈವೇಳೆಗೆ ಮುಖ್ಯ ದ್ವಾರ ಮತ್ತು ಅದು ವಾಸ್ತು ನೀತಿಗಳಿಗೆ ಅನುಗುಣವಾಗಿರುವುದು ಎಷ್ಟು ಮುಖ್ಯ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಂಡಿರುತ್ತೀರಿ. ಸೀಮಿತ ಬಜೆಟ್‌ನಲ್ಲಿ ನಿಮ್ಮ ಮನೆಯನ್ನು ನವೀಕರಿಸಲು ನೀವು ಎದುರು ನೋಡುತ್ತಿದ್ದರೆ, ಈ ಮುಂದಿನ ವಿವರಗಳ ಬಗ್ಗೆ ಗಮನಹರಿಸಿ:

  • ನಿಮ್ಮ ಮುಖ್ಯ ದ್ವಾರದ ಪ್ರವೇಶ ಸ್ಥಳವು ಸ್ವಾಗತಕಾರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ವಾಸ್ತುವಿಗೆ ಅನುಗುಣವಾದ ಬಣ್ಣಗಳನ್ನು ಪೇಂಟ್ ಮಾಡಿ.
  • ಮುಖ್ಯ ಬಾಗಿಲು ಋಣಾತ್ಮಕ ವಲಯದಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
  • ಹಿಂಜಸ್‌ ಮೃದುವಾಗಿವೆ ಎಂಬುದನ್ನು ಖಚಿತಪಡಿಸಿ. ಮುಖ್ಯ ಬಾಗಿಲು ಕಿರುಗುಡುತ್ತಿದ್ದರೆ ಕುಟುಂಬ ಸದಸ್ಯರ ಮಧ್ಯದ ಸಂಬಂಧಗಳು ಕ್ಷೀಣಿಸುತ್ತವೆ.
  • ಮುಖ್ಯ ದ್ವಾರವನ್ನು ತೆರೆಯುವಾಗ ಹಾಕುವಾಗ ಧ್ವನಿ ಮಾಡುವ ತುಕ್ಕು ಹಿಡಿದ ಲಾಕ್‌ಗಳನ್ನು ಎಂದಿಗೂ ಬಳಸಬೇಡಿ. ಇಂತಹ ಲಾಕ್‌ಗಳನ್ನು ಬದಲಿಸಿ ಅಥವಾ ಅವುಗಳಿಗೆ ಕಾಲಕಾಲಕ್ಕೆ ತೈಲ ಹಾಕಿ.
  • ವಾಸ್ತು ಶಾಸ್ತ್ರದ ಮುಖ್ಯ ಗುರಿಯೆಂದರೆ ಮನೆಯ ಒಳಗೆ ಶಕ್ತಿಯನ್ನು ಊರ್ಧ್ವಗೊಳಿಸುವದುಉ. ಹೀಗಾಗಿ, ಕಮಾನು ಇರುವ ಮುಖ್ಯ ದ್ವಾರವನ್ನು ಬಳಸದೇ ಇರುವುದು ಉತ್ತಮ. ಇದು ಶಕ್ತಿಯ ಹರಿವನ್ನು ಕಡಿಮೆ ಮಾಡುತ್ತದೆ.
  • ಸ್ವತಃ ಮುಚ್ಚಿಕೊಳ್ಳುವ ಬಾಗಿಲುಗಳನ್ನು ಬಳಸಬೇಡಿ.
  • ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಬಾಗಿಲುಗಳು ಇದ್ದರೆ, ಪ್ರತಿ ಫ್ಲೋರ್‌ನಲ್ಲಿ ಒಂದರ ಮೇಲೆ ಇನ್ನೊಂದು ಬಾಗಿಲು ಇರಬಾರದು.

ಮುಖ್ಯ ಗೇಟ್‌ ವಿನ್ಯಾಸ ಐಡಿಯಾಗಳನ್ನೂ ನೋಡಿ.

ಮುಖ್ಯ ಗೇಟ್‌ ವಾಸ್ತು: ಬಣ್ಣಗಳು

  • ವರ್ಣಮಯ ಮುಖ್ಯ ದ್ವಾರವನ್ನು ನಿರ್ಮಿಸುವ  ಮೂಲಕ ನಿಮ್ಮ ಮನೆಯ ಬಾಗಿಲನ್ನು ಹೆಚ್ಚು ಆಕರ್ಷಕವಾಗಿಸಿ. ಧನಾತ್ಮಕ ವಾತಾವರಣಕ್ಕೆ ನೀವು ಮಂದ ಬಣ್ಣಗಳನ್ನು ಬಳಸಬಹುದು.
  • ಮೃದು ಹಳದಿ, ಮರದ ಶೇಡ್‌ಗಳು ಅಥವಾ ಮಣ್ಣಿನ ಶೇಡ್‌ಗಳನ್ನು ಬಳಸಿ ಈ ಪರಿಣಾಮವನ್ನು ಉಂಟು ಮಾಡಬಹುದು.
  • ಕೆಂಪು ಅಥವಾ ಕಿತ್ತಳೆಯಂತಹ ಪ್ರಕಾಶಮಾನ ಬಣ್ಣಗಳನ್ನು ಬಳಸಬೇಡಿ.
  • ಮುಖ್ಯ ಬಾಗಿಲಿಗೆ ಎಂದಿಗೂ ಕಪ್ಪು ಬಣ್ಣವನ್ನು ಬಳಸಬೇಡಿ. ಇದರಿಂದ ಬೇಸರ,  ಸಿಟ್ಟು ಇತ್ಯಾದಿ ಋಣಾತ್ಮಕ ಭಾವಗಳನ್ನು ಈ ಬಣ್ಣಗಳು ಹೆಚ್ಚಿಸುತ್ತವೆ.
  • ಮನೆಯ ಬೆಡ್‌ರೂಮ್‌ ಬಾಗಿಲುಗಳಿಗೆ ಬಿಳಿ ಬಣ್ಣ ಉತ್ತಮ ಆಯ್ಕೆಯಾಗಿದೆ. ಈ ಬಣ್ಣವು ಪ್ರಶಾಂತತೆ ಮತ್ತು ಖುಷಿಯನ್ನು ತರುತ್ತದೆ.

 

ಉತ್ತರ ದಿಕ್ಕಿನ ಮನೆಯ ಮುಖ್ಯ ಬಾಗಿಲು ವಾಸ್ತು

ಉತ್ತರ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನು ಆಳುತ್ತಾನೆ. ಉತ್ತರದ ಕಡೆಗೆ ಮುಖಮಾಡಿರುವ ಮುಖ್ಯ ದ್ವಾರವು ಅನೇಕ ಜನರಿಗೆ, ವಿಶೇಷವಾಗಿ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವ್ಯವಹಾರವನ್ನು ನಡೆಸುತ್ತಿರುವವರಿಗೆ ಮಂಗಳಕರ ಮತ್ತು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಉತ್ತರಾಭಿಮುಖವಾದ ಮನೆಯನ್ನು ಆಯ್ಕೆಮಾಡುವಾಗ ಅಥವಾ ಮನೆಯನ್ನು ನಿರ್ಮಿಸುವಾಗ, ವಿವಿಧ ಕೋಣೆಗಳ ನಿಯೋಜನೆ ಸೇರಿದಂತೆ ವಾಸ್ತು ನಿಯಮಗಳನ್ನು ಪಾಲಿಸಬೇಕು. ಕೆಲವು ಸಲಹೆಗಳು ಇಲ್ಲಿವೆ:

  • ವಾಸದ ಕೋಣೆ: ವಾಯವ್ಯ ದಿಕ್ಕು ವಾಸದ ಕೋಣೆಗೆ ಸೂಕ್ತವಾದ ದಿಕ್ಕು.
  • ಮಲಗುವ ಕೋಣೆ: ಉತ್ತರಾಭಿಮುಖವಾಗಿರುವ ಮನೆಯಲ್ಲಿ ಮಲಗುವ ಕೋಣೆ ಪಶ್ಚಿಮ, ವಾಯುವ್ಯ, ದಕ್ಷಿಣ ಮತ್ತು ನೈಋತ್ಯ ದಿಕ್ಕಿನಲ್ಲಿರಬೇಕು.
  • ಅಡುಗೆ: ಅಡುಗೆಮನೆಗೆ ಉತ್ತಮ ದಿಕ್ಕು ಆಗ್ನೇಯ ಅಥವಾ ವಾಯುವ್ಯ ದಿಕ್ಕು.
  • ಮೆಟ್ಟಿಲು: ಮೆಟ್ಟಿಲು ದಕ್ಷಿಣ, ಪಶ್ಚಿಮ, ಆಗ್ನೇಯ, ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು. ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವುದನ್ನು ತಪ್ಪಿಸಿ. ಮೆಟ್ಟಿಲುಗಳು ಪ್ರದಕ್ಷಿಣಾಕಾರವಾಗಿ ಇರುವಂತೆ ನೋಡಿಕೊಳ್ಳಿ.

 

ಈಶಾನ್ಯ ಪ್ರವೇಶ ವಾಸ್ತು

ಈಶಾನ್ಯ ದಿಕ್ಕಿಗೆ ಎದುರಾಗಿರುವ ಮನೆಯ ಮುಖ್ಯ ದ್ವಾರವನ್ನು ಈಶಾನ್ಯ ಮೂಲೆ ಎಂದೂ ಕರೆಯುತ್ತಾರೆ, ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ನಿವಾಸಿಗಳಿಗೆ ಅದೃಷ್ಟವನ್ನು ತರುತ್ತದೆ. ವಾಸ್ತು ಪ್ರಕಾರ ಈಶಾನ್ಯ ಪ್ರವೇಶವು ಹೊಸ ಅವಕಾಶಗಳನ್ನು ಆಕರ್ಷಿಸುತ್ತದೆ. ಈಶಾನ್ಯ ಮುಖದ ಮನೆ ಪ್ರವೇಶಕ್ಕಾಗಿ ಅನುಸರಿಸಬೇಕಾದ ಕೆಲವು ವಾಸ್ತು ಸಲಹೆಗಳು ಇಲ್ಲಿವೆ:

  • ಋಣಾತ್ಮಕ ಶಕ್ತಿಗಳನ್ನು ದೂರ ಇಡಲು ದೊಡ್ಡದಾದ ಮತ್ತು ಚೆನ್ನಾಗಿ ಬೆಳಕು ಇರುವ ಪ್ರವೇಶ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
  • ಈಶಾನ್ಯ ಮೂಲೆಯಲ್ಲಿ ಮೆಟ್ಟಿಲು ಅಥವಾ ಮಲಗುವ ಕೋಣೆಗಳನ್ನು ಹೊಂದಿರುವುದನ್ನು ತಪ್ಪಿಸಿ.
  • ನೈಋತ್ಯ ಮೂಲೆಯಲ್ಲಿ ಮಾಸ್ಟರ್ ಬೆಡ್ ರೂಮ್ ಅನ್ನು ವಿನ್ಯಾಸಗೊಳಿಸಿ. ಆಗ್ನೇಯ ದಿಕ್ಕಿನಲ್ಲಿ ಯಾವುದೇ ಮಲಗುವ ಕೋಣೆ ಬೇಡ.
  • ಈಶಾನ್ಯ ದಿಕ್ಕಿನಲ್ಲಿ ಅಡುಗೆ ಮನೆ ಇಡಬೇಡಿ. ಅಡುಗೆ ಮನೆ ವಿನ್ಯಾಸಕ್ಕಾಗಿ ಆಗ್ನೇಯ ಅಥವಾ ವಾಯುವ್ಯ ದಿಕ್ಕುಗಳನ್ನು ಶಿಫಾರಸು ಮಾಡಲಾಗಿದೆ.

ವಾಸ್ತು ಪ್ರಕಾರ ಮುಖ್ಯ ದ್ವಾರಕ್ಕೆ ಯಾವ ಮರ ಹೆಚ್ಚು ಉತ್ತಮ?

ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯ ದ್ವಾರವನ್ನು ವಿನ್ಯಾಸ ಮಾಡಲು ಮರ ಅತ್ಯಂತ ಮಂಗಳಕರ ಎಮದು ಪರಿಗಣಿಸಲಾಗಿದೆ. ಮುಖ್ಯ ದ್ವಾರವನ್ನು ಉತ್ತಮ ಗುಣಮಟ್ಟದ ಮರವನ್ನು ಬಳಸಿ ಮಾಡಬೇಕು. ಇದರಲ್ಲಿ ತೇಗ ಅಥವಾ ಹೊನ್ನೆ ಮರಗಳಂತಹವನ್ನು ಬಳಸಬಹುದು. ತೆಂಗಿನ ಮರ ಅಥವಾ ಪೀಪಲ್‌ ಮರದಂತಹವನ್ನು ಬಳಸಬೇಡಿ.

 

ಪ್ರಮುಖ ಪ್ರಶ್ನೋತ್ತರಗಳು (FAQs)

ಮನೆ ಪ್ರವೇಶಕ್ಕೆ ಯಾವ ದಿಕ್ಕು ಹೆಚ್ಚು ಉತ್ತಮ?

ಮುಖ್ಯ ಬಾಗಿಲು ಅಥವಾ ಪ್ರವೇಶವು ಎಂದಿಗೂ ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇರಬೇಕು. ಈ ದಿಕ್ಕುಗಳು ಮಂಗಳಕರ ಎಂದು ಪರಿಗಣಿಸಲಾಗಿದೆ. ದಕ್ಷಿಣ, ಆಗ್ನೇಯ (ಉತ್ತರದ ಬದಿ_, ನೈರುತ್ಯ (ಪೂರ್ವದ ಬದಿ) ಅಥವಾ ವಾಯವ್ಯ ದಿಕ್ಕಿನಲ್ಲಿ ಮುಖ್ಯ ಬಾಗಿಲು ಇಡಬೇಡಿ.

ಲಾಫಿಂಗ್ ಬುದ್ಧನನ್ನು ಮುಖ್ಯ ಬಾಗಿಲ ಬಳಿ ಇಡಬಹುದೇ?

ಮನೆಯ ಒಳಗೆ ನೋಡುತ್ತಿರುವಂತೆ, ಮುಖ್ಯ ದ್ವಾರವನ್ನು ನೋಡುತ್ತಿರುವಂತೆ ಅಥವಾ ವಿರುದ್ಧ ದಿಕ್ಕಿಗೆ ನೋಡುತ್ತಿರುವಂತೆ ಲಾಫಿಂಗ್‌ ಬುದ್ಧ ಇಡಬಹುದು. ಮುಖ್ಯ ದ್ವಾರದಿಂದ ಪ್ರವೇಶಿಸುವ ಶಕ್ತಿಯನ್ನು ಲಾಫಿಂಗ್‌ ಬುದ್ಧ ಸ್ವಾಗತಿಸುತ್ತದೆ ಮತ್ತು ಅನಗತ್ಯ ಶಕ್ತಿಯನ್ನು ಇದು ನಿವಾರಿಸುತ್ತದೆ.

ಮುಖ್ಯ ದ್ವಾರಕ್ಕೆ ಯಾವ ಬಣ್ಣ ಅದೃಷ್ಟದಾಯಕ?

ವಾಸ್ತು ಪ್ರಕಾರ ಮುಖ್ಯ ಬಾಗಿಲಿನ ಬಣ್ಣವು ಈ ಲೇಖನದಲ್ಲಿ ವಿವರಿಸಿದಂತೆ ದಿಕ್ಕು ಆಧರಿಸಿ ಇರಬೇಕು.

ಮುಖ್ಯ ದ್ವಾರದ ಎದುರು ಗೋಡೆ ಇರಬಹುದೇ?

ವಾಸ್ತು ಶಾಸ್ತ್ರದ ಪ್ರಕಾರ ಮುಖ್ಯ ದ್ವಾರದ ಎದುರು ಯಾವುದೇ ಗೋಡೆ ಇರಬಾರದು. ಆದರೆ, ಕೋಣೆಗೆ ಹೋಗುವ ಇನ್ನೊಂದು ಬಾಗಿಲು ಇರಬಹುದು.

ಮುಖ್ಯ ಬಾಗಿಲಿನ ಬಳಿ ಡೋರ್‌ಮ್ಯಾಟ್‌ ಅನ್ನು ಯಾಕೆ ಇಡಬೇಕು?

ವಾಸ್ತು ಪ್ರಕಾರ, ಮುಖ್ಯ ದ್ವಾರದ ಬಳಿ ಡೋರ್‌ಮ್ಯಾಟ್‌ ಹಾಕಿದರೆ ಶೂಗಳ ಧೂಳು ಮತ್ತು ಕೊಳೆ ನಿವಾರಣೆಯಾಗುತ್ತದೆ. ಅಲ್ಲದೆ ಇದು ಮನೆಗೆ ಋಣಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. ಡೋರ್‌ಮ್ಯಾಟ್‌ಗೆ ನೈಸರ್ಗಿಕ ಬಟ್ಟೆಯನ್ನು ಬಳಸಿ. ಆಗಾಗ್ಗೆ ಇದನ್ನು ಸ್ವಚ್ಛಗೊಳಿಸುತ್ತಿರಿ. ಮುಖ್ಯ ಬಾಗಿಲಿನ ಬಳಕೆಗೆ, ಆಯತಾಕಾರದ ಡೋರ್‌ಮ್ಯಾಟ್‌ ಹಾಕಿದರೆ, ಇಡೀ ಬಾಗಿಲಿನ ಸ್ಥಳವನ್ನು ಮುಚ್ಚುತ್ತದೆ.

ಆಗ್ನೇಯ ದಿಕ್ಕಿನ ಮನೆ ಉತ್ತಮವೇ?

ಆಗ್ನೇಯ ದಿಕ್ಕಿನ ಕಡೆಗೆ ಇರುವ ಮನೆ ವಾಸ್ತು ದೋಷವನ್ನು ಹೊಂದಿರುತ್ತದೆ.

(ಹರಿಣಿ ಬಾಲಸುಬ್ರಮಣ್ಯನ್‌ ಅವರಿಂದ ವಿವರಗಳ ಸಹಿತ)

Source: https://ecis2016.org/.
Copyright belongs to: ecis2016.org

Source: https://ecis2016.org
Category: Kannada

Debora Berti

Università degli Studi di Firenze, IT

Leave a Reply

Your email address will not be published. Required fields are marked *

Back to top button